‘ಓಮಿಕ್ರಾನ್’ ಶೀರ್ಷಿಕೆಯ 60 ವರ್ಷದ ಹಿಂದಿನ ಚಲನಚಿತ್ರದ ಪೋಸ್ಟರ್‌ ಹಂಚಿಕೊಂಡ ಆನಂದ್ ಮಹೀಂದ್ರಾ..!

ನವದೆಹಲಿ: ಕೊರೊನಾ ವೈರಸ್​ ಇಡೀ ಜಗತ್ತನ್ನು ಬಿಟ್ಟು ಬಿಡದೆ ಕಾಡುತ್ತಿದೆ. ದಿನಕಳೆದಂತೆ ಕೊವಿಡ್​ನ ಹೊಸಹೊಸ ರೂಪಾಂತರಿಗಳು ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚುತ್ತಿದೆ. ಹೊಸ ರೂಪಾಂತರಿಗಳಿಂದ ಈ ವೈರಸ್​ ಬಗೆಗಿನ ಅಧ್ಯಯನ ಕ್ಲಿಷ್ಟವಾಗುತ್ತ ಸಾಗಿದೆ. ಈಗ ಓಮಿಕ್ರಾನ್​ ರೂಪಾಂತರಿ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಕರ್ನಾಟಕಕ್ಕೂ ಕಾಲಿಟ್ಟಿದೆ. ವಿಶೇಷವೆಂದರೆ ಈ ಹೆಸರಿನಲ್ಲಿ ಸಿನಿಮಾ ಬಹಳ ಹಿಂದೆಯೇ ಬಂದಿತ್ತು..! 1963ರಲ್ಲಿ ಬಂದ ಈ ಸಿನಿಮಾದ ಪೋಸ್ಟರ್​ ಅನ್ನು ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ..! ಹೊಸ ಕೋವಿಡ್ -19 ರೂಪಾಂತರಕ್ಕೆ ನೀಡಲಾದ ಓಮ್ರಿಕಾನ್‌ ವೈರಸ್‌ ಅನ್ನು ದಕ್ಷಿಣ ಆಫ್ರಿಕಾದಲ್ಲಿ ಇದನ್ನು ಮೊದಲು ಪತ್ತೆ ಮಾಡಲಾಯಿತು. 1963ರಲ್ಲೇ ಈ ಸಿನಿಮಾ ಇಟಲಿ ಭಾಷೆಯಲ್ಲಿ ತೆರೆಗೆ ಬಂದಿತ್ತು ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
1963 ರ ಇಟಾಲಿಯನ್ ವೈಜ್ಞಾನಿಕ ಕಾಲ್ಪನಿಕ-ಹಾಸ್ಯ ಚಲನಚಿತ್ರವಾದ OMICRON ಬಗ್ಗೆ ತಿಳಿಸಿದ್ದಾರೆ. ಶಾಲೆಯ ಗೆಳೆಯರೊಬ್ಬರು ನನಗೆ ಕಳುಹಿಸಿದ್ದಾರೆ” ಎಂದು ಮಹೀಂದ್ರ ಬರೆದಿದ್ದಾರೆ.

ಮಹೀಂದ್ರಾ ಚಿತ್ರದ ಪೋಸ್ಟರ್ ಮತ್ತು ಕಥಾವಸ್ತುವಿನ ಬಗ್ಗೆ ಮಾಹಿತಿಯನ್ನು ಒಳಗೊಂಡಿರುವ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ. ಇಡೀ ಜಗತ್ತನ್ನು ಬೆಚ್ಚಿಬೀಳಿಸುವ ಕೊರೊನಾವೈರಸ್ ರೂಪಾಂತರದೊಂದಿಗೆ ಚಲನಚಿತ್ರವು ಹೆಸರನ್ನು ಹಂಚಿಕೊಂಡರೂ, ಪ್ರಸ್ತುತ ಕೋವಿಡ್‌-19 ಪರಿಸ್ಥಿತಿಯೊಂದಿಗೆ ಇದು ಹೆಸರಿನಿಂದ ಮಾತ್ರ ಹೋಲುತ್ತದೆ. ಚಲನಚಿತ್ರವು ಅನ್ಯಗ್ರಹದ ಜನಾಂಗವು (ಏಲಿಯನ್‌) ಈ ಗ್ರಹದ ಬಗ್ಗೆ ತಿಳಿದುಕೊಳ್ಳಲು ಮಾನವನ ದೇಹವನ್ನು ತೆಗೆದುಕೊಂಡು ಹೋಗುವುದರ ಬಗ್ಗೆ ಇದೆ. ಮೃತಪಟ್ಟ ಕಾರ್ಖಾನೆ ಸಿಬ್ಬಂದಿಗಳನ್ನು ಅನ್ಯಜೀವಿ ಗ್ರಹಗಳು ತೆಗೆದುಕೊಂಡು ಹೋಗುತ್ತವೆ. ಇವು ಮೃತಪಟ್ಟವರಿಗೆ ಜೀವ ತರಿಸುತ್ತವೆ. ಈ ಮೂಲಕ ಭೂಮಿ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತವೆ. ಇದು ಸಿನಿಮಾದ ಕತೆಯ ಸಾರ. ಈ ಚಿತ್ರವನ್ನು ಉಗೊ ಗ್ರೆಗೊರೆಟ್ಟಿ ನಿರ್ದೇಶಿಸಿದ್ದಾರೆ ಮತ್ತು ರೆನಾಟೊ ಸಾಲ್ವಟೋರಿ ಮತ್ತು ರೋಸ್ಮರಿ ಡೆಕ್ಸ್ಟರ್ ನಟಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

ಇದೇರೀತಿ ಖ್ಯಾತ ನಿರ್ದೇಶಕ ರಾಮಗೋಪಾಲ ವರ್ಮ ಸಹ ಮತ್ತೊಂದು ಪೋಸ್ಟ್‌ ಅನ್ನು ಟ್ವಟ್ಟರಿನಲ್ಲಿ ಸೇರ್‌ ಮಾಡಿದ್ದಾರೆ. ಅದರ ಹೆಸರು ಸಹ ಓಮಿಕ್ರಾನ್‌ ವೇರಿಯಂಟ್‌ ಎಂದು ಹೆಸರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement