ಕೋಲ್ಕತ್ತಾ: ಪ್ರಜ್ಞಾವಂತಿಕೆ ಮತ್ತು ಧೈರ್ಯವನ್ನು ಪ್ರದರ್ಶಿಸಿದ ಘಟನೆಯಲ್ಲಿ, ಪಶ್ಚಿಮ ಬಂಗಾಳದಲ್ಲಿ ರೈಲಿಗೆ ಸಿಲುಕುತ್ತಿದ್ದ ಮಹಿಳೆಯನ್ನುರೈಲ್ವೆ ಪೊಲೀಸ್ ತಪ್ಪಿಸಿದ್ದಾನೆ. ವರದಿಯ ಪ್ರಕಾರ, ಆರ್ಪಿಎಫ್ ಅಧಿಕಾರಿ ಬಬ್ಲು ಕುಮಾರ್ ಅವರನ್ನು ಪಶ್ಚಿಮ ಬಂಗಾಳದ ಪುರುಲಿಯಾ ನಿಲ್ದಾಣದಲ್ಲಿ ನಿಯೋಜಿಸಲಾಗಿತ್ತು. ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸುತ್ತಿದ್ದ ಮಹಿಳೆಯೊಬ್ಬರು ಆಕಸ್ಮಿಕವಾಗಿ ರೈಲು ಮತ್ತು ಪ್ಲಾಟ್ಫಾರ್ಮ್ ಅಂತರದ ನಡುವೆ ಜಾರಿ ಬಿದ್ದಿದದ್ದಾರೆ. ಇದನ್ನು ಬಬ್ಲು ಕುಮಾರ್ ಕಂಡಿದ್ದಾರೆ. ಆರ್ಪಿಎಫ್ ಅಧಿಕಾರಿ ತಕ್ಷಣವೇ ಓಡಿಹೋಗಿ ಆಮಹಿಳೆಯನ್ನು ಹೊರಗೆ ಎಳೆದಿದ್ದಾರೆ. ಅಪಾಯವಾಗುವುದನ್ನು ಕ್ಷಣಾರ್ಧದಲ್ಲಿ ತಪ್ಪಿಸಿದ್ದಾರೆ.
ನಿಲ್ದಾಣದ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ರೈಲ್ವೆ ಇಲಾಖೆ ತನ್ನ ಟ್ವಿಟರ್ ನಲ್ಲಿ ಶೇರ್ ಮಾಡಿದೆ. ವೇಗವಾಗಿ ಚಲಿಸುತ್ತಿದ್ದ ಸಂತ್ರಗಚಿ-ಆನಂದ್ ವಿಹಾರ್ ಎಕ್ಸ್ಪ್ರೆಸ್ನಿಂದ ರೈಲಿನಿಂದ ಮೊದಲು ಮಹಿಳೆಯೊಬ್ಬರು ಜಿಗಿದಿದ್ದಾರೆ, ಆದರೆ ಬ್ಯಾಲೆನ್ಸ್ ಸಿಗದೆ ಕೆಳಗೆ ಬಿದ್ದಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೊಬ್ಬ ಮಹಿಳೆ ರೈಲು ಚಲಿಸುತ್ತಿರುವಾಗಲೇ ಜಿಗಿದಿದ್ದಾರೆ. ಆದರೆ ಇವರು ಬ್ಯಾಲೆನ್ಸ್ ತಪ್ಪಿ ರೈಲಿನ ಹತ್ತಿರದಲ್ಲೇ ಬಿದ್ದಿದ್ದಾರೆ. ಸ್ವಲ್ ಹೆಚ್ಚು ಕಡಿಮೆಯಾಗಿದ್ದರೂ ಅವರು ನಿಲ್ದಾಣದ ರೈಲು ಹಳಿ ಮೇಲೆ ಬೀಳುತ್ತಿದ್ದರು. ಅಷ್ಟರಲ್ಲಾಗಲೇ ರೈಲ್ವೆ ಪೊಲೀಸ್ ಅಧಿಕಾರಿ ಓಡಿಬಂದು ಮಹಿಳೆಯನ್ನು ಎಳೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ