ಕೋವಿಡ್‌-19ರಿಂದ ಚೇತರಿಸಿಕೊಂಡ ನಂತರ ಆಸ್ಪತ್ರೆಯಿಂದ ಬಿಡುಗಡೆಯಾದ ಕಮಲ್ ಹಾಸನ್

ಚೆನ್ನೈ: ಕೋವಿಡ್‌-19 ಸೋಂಕಿನಿಂದ ಆಸ್ಪತ್ರೆಗೆ ದಾಕಲಾಗಿದ್ದ ಖ್ಯಾತ ನಟ ಕಮಲ್ ಹಾಸನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಈ ಕುರಿತು ಅವರು ಇನ್ಸ್ಟಾಗ್ರಾಂ (Instagram)ನಲ್ಲಿ ಹಂಚಿಕೊಂಡಿದ್ದಾರೆ.
ನವೆಂಬರ್ 22 ರಂದು ಕೋವಿಡ್‌-19 ಗೆ ಧನಾತ್ಮಕ ಪರೀಕ್ಷೆ ನಡೆಸಿದ ನಂತರ ಅವರನ್ನು ಚೆನ್ನೈನ ಶ್ರೀ ರಾಮಚಂದ್ರ ವೈದ್ಯಕೀಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.
ತಮಿಳಿನಲ್ಲಿ ಬರೆದಿರುವ ಹೇಳಿಕೆಯಲ್ಲಿ, ಹಾಸನ್ ಅವರು ತಮ್ಮ ದಿನನಿತ್ಯದ ಕೆಲಸಕ್ಕೆ ಮರಳಿದ್ದೇನೆ ಎಂದು ಹೇಳಿದ್ದಾರೆ. ತನ್ನನ್ನು ಚೆನ್ನಾಗಿ ನೋಡಿಕೊಂಡ ಆಸ್ಪತ್ರೆ ಸಿಬ್ಬಂದಿಗೆ ಹಾಗೂ ತನಗಾಗಿ ಪ್ರಾರ್ಥಿಸಿದ ಅಭಿಮಾನಿಗಳಿಗೆ ಹಾಸನ್ ಧನ್ಯವಾದ ತಿಳಿಸಿದ್ದಾರೆ. ನಟನು ತನ್ನ ಮುಂಬರುವ ಚಿತ್ರ ವಿಕ್ರಮ್ ಮತ್ತು ರಿಯಾಲಿಟಿ ಶೋ ಬಿಗ್ ಬಾಸ್‌ನ ಸಿಬ್ಬಂದಿಗೆ ತನ್ನ ಅನುಪಸ್ಥಿತಿಯಲ್ಲಿ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಕ್ಕಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸ್ಟಾಲಿನ್ ಮತ್ತು ಇತರ ರಾಜಕೀಯ ನಾಯಕರು, ನಟ ರಜನಿಕಾಂತ್ ಮತ್ತು ಇತರ ಚಿತ್ರರಂಗದ ಸದಸ್ಯರು ಕಮಲ್‌ ಹಾಸನ್‌ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.

ನಿಮ್ಮ ಕಾಮೆಂಟ್ ಬರೆಯಿರಿ

advertisement