ಮಹಾರಾಷ್ಟ್ರ: 21,018 ಕೆಜಿ ಗೋಮಾಂಸ ವಶ; ಇಬ್ಬರ ಬಂಧನ

ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಪೊಲೀಸರು 20.6 ಲಕ್ಷ ರೂ.ಗಳ ಮೌಲ್ಯದ ಗೋಮಾಂಸವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಕಂಟೈನರ್ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ತಮಿಳುನಾಡಿನ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಖಚಿತ ಸುಳಿವಿನ ಆಧಾರದ ಮೇಲೆ, ಜಿಲ್ಲಾ ಗ್ರಾಮಾಂತರ ಪೊಲೀಸರು ಪಾಲ್ಘರ್‌ನ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿರುವ ಘೋಲ್ ಗ್ರಾಮದಲ್ಲಿ ಬಲೆ ಬೀಸಿದರು ಮತ್ತು ಕಂಟೈನರ್ ಟ್ರಕ್ ಅನ್ನು ತಡೆದರು ಎಂದು ಹಿರಿಯ ಇನ್ಸ್‌ಪೆಕ್ಟರ್ ಅಜಯ್ ವಾಸವೆ ತಿಳಿಸಿದ್ದಾರೆ.
ಪೊಲೀಸರು ತಪಾಸಣೆ ನಡೆಸಿದಾಗ ತಮಿಳುನಾಡಿನಿಂದ ಗೋಮಾಂಸವನ್ನು ರಾಜ್ಯಕ್ಕೆ ಸಾಗಿಸುತ್ತಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಸಾಗಣೆದಾರರು ರವಾನೆಯ ಬಗ್ಗೆ ನಕಲಿ ಘೋಷಣೆಯನ್ನು ನೀಡಿದ್ದರು ಮತ್ತು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆಪೊಲೀಸರು ಅವರನ್ನು ಹಿಡಿದಿದ್ದಾರೆ ಎಂದು ಅಧಿಕಾರಿ ಹೇಳಿದರು.
ವಾಹನದಿಂದ 20 ಲಕ್ಷ ಮೌಲ್ಯದ ಒಟ್ಟು 21,018 ಕೆಜಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಅವರು ಹೇಳಿದರು. ಆರೋಪಿಗಳಾದ ತಮಿಳುನಾಡಿನ ಅರಿಯಲೂರು ನಿವಾಸಿಗಳಾದ ಕೊಲಿಂಚಿನಾಥ್ ರಾಜೇಂದ್ರ ವಾನಿಯಾರ್ (37) ಮತ್ತು ರಂಜಿತ್ ಕುಮಾರ್ ಗಣೇಶನ್ (36) ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಂಟೈನರ್ ಟ್ರಕ್‌ನ ಮಾಲೀಕರು ಮತ್ತು ಅಪರಾಧಕ್ಕೆ ಸಂಬಂಧಿಸಿದ ಇತರರ ವಿರುದ್ಧ ಐಪಿಸಿ, ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ರೋಹಿತ್ ವೇಮುಲಾ ದಲಿತನಲ್ಲ : ಪೊಲೀಸರ ಅಂತಿಮ ವರದಿ ; ಎಲ್ಲ ಆರೋಪಿಗಳಿಗೆ ಕ್ಲೀನ್ ಚಿಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement