ನಾಗಲ್ಯಾಂಡಿನಲ್ಲಿ ನಾಗರಿಕರ ಹತ್ಯೆ ದುರದೃಷ್ಟಕರ ಎಂದ ಸೇನೆ, ಉನ್ನತ ಮಟ್ಟದ ತನಿಖೆಗೆ ಆದೇಶ

ಗುವಾಹತಿ: ನಾಗಲ್ಯಾಂಡ್ ನ ಮೊನ್ ಜಿಲ್ಲೆಯಲ್ಲಿ ನಾಗರಿಕರ ಹತ್ಯೆಯ ಹೊಣೆಯನ್ನು ಭಾರತೀಯ ಸೇನೆ ಹೊತ್ತುಕೊಂಡಿದೆ.
ಈ ಘಟನೆ ನಡೆದುದಕ್ಕೆ ವಿಷಾದವಿದೆ. ನಾಗರಿಕರ ಸಾವಿಗೆ ಕಾರಣ ಪತ್ತೆಹಚ್ಚಲು ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ನಾಗಲ್ಯಾಂಡ್ ನ ಡಿಮಪುರ್ ಮೂಲದ 3 ಕಾರ್ಪ್ಸ್ ಹೇಳಿಕೆಯಲ್ಲಿ ತಿಳಿಸಿದೆ.
ದಂಗೆಕೋರರ ಚಲನವಲನದ ಖಚಿತ ಮಾಹಿತಿ ಗುಪ್ತಚರ ಇಲಾಖೆಯಿಂದ ಪಡೆದ ನಂತರ, ತಿರು, ಮೊನ್ ಜಿಲ್ಲೆ, ನಾಗಾಲ್ಯಾಂಡ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಲು ಯೋಜಿಸಲಾಯಿತು ಎಂದು ಅದು ಹೇಳಿದೆ.
ಭದ್ರತಾ ಪಡೆ ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ 13 ಮಂದಿ ನಾಗರಿಕರು ಮೃತಪಟ್ಟಿದ್ದಾರೆ ಎಂದು ಹಲವು ನಾಗಾ ಸಂಘಟನೆಗಳು ತಿಳಿಸಿವೆ. ಇತರ 11 ಮಂದಿ ನಾಗರಿಕರು ಗಾಯಗೊಂಡಿದ್ದು ಮತ್ತಿಬ್ಬರು ನಾಪತ್ತೆಯಾಗಿದ್ದಾರೆ. ದಿನಗೂಲಿ ಕಾರ್ಮಿಕರಾಗಿದ್ದ ಸಂತ್ರಸ್ತರು ಕಲ್ಲಿದ್ದಲು ಗಣಿಯಿಂದ ಪಿಕ್ ಅಪ್ ಟ್ರಕ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ.

ಪೂರ್ವ ನಾಗಾಲ್ಯಾಂಡ್‌ನ ಅಪೆಕ್ಸ್ ಬುಡಕಟ್ಟು ಸಂಘಟನೆಯಾದ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO), ರಾಜ್ಯದ ರಾಜಧಾನಿ ಕೊಹಿಮಾ ಬಳಿಯ ಕಿಸಾಮಾದಲ್ಲಿ ನಡೆಯುತ್ತಿರುವ ವಾರ್ಷಿಕ ಹಾರ್ನ್‌ಬಿಲ್ ಉತ್ಸವದಿಂದ ಹಿಂದೆ ಸರಿಯಲು ನಿರ್ಧರಿಸಿದೆ.
ಆರು ಬುಡಕಟ್ಟುಗಳನ್ನು ಪ್ರತಿನಿಧಿಸುವ ENPO ತನ್ನ ಪ್ರದೇಶದಲ್ಲಿ ರಕ್ತಪಾತದ ವಿರುದ್ಧ ಮೊದಲೇ ನಿರ್ಣಯವನ್ನು ಅಂಗೀಕರಿಸಿತ್ತು.
ನಮ್ಮ ಜನರು ಕೊಲ್ಲಲ್ಪಟ್ಟಾಗ ನಾವು ಉತ್ಸವದಲ್ಲಿ ಹೇಗೆ ನೃತ್ಯ ಮಾಡಬಹುದು?” ಕೊನ್ಯಾಕ್ ನಾಯಕ ಹೇಳಿದ್ದಾರೆ.
ಕೆಲವು ನಾಗಾ ಸಂಘಟನೆಗಳು ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದವು. ನ್ಯಾಯ ದೊರಕದಿದ್ದಲ್ಲಿ ಕುಟುಂಬಸ್ಥರು ಮೃತದೇಹಗಳನ್ನು ಸ್ವೀಕರಿಸುವುದಿಲ್ಲ ಎಂದು ಎಚ್ಚರಿಸಿದರು.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement