ಮಗನ ಮದುವೆಗೆ ಬರೋಬ್ಬರಿ 4.28 ಕೇಜಿ ತೂಕದ ಮದುವೆ ಕಾರ್ಡ್ ಮಾಡಿಸಿದ ತಂದೆ…! ಕಾರ್ಡ್‌ ಬೆಲೆ..?

ಗಾಂಧಿನಗರ:ಭಾರತದಲ್ಲಿ ಜನರು ಮದುವೆಗಾಗಿ ಲಕ್ಷಾಂತರ ಹಣವನ್ನು ಖರ್ಚು ಮಾಡುತ್ತಾರೆ. ಅದೇ ರೀತಿ ಇಲ್ಲೊಬ್ಬರು ತನ್ನ ಮಗನ ಮದುವೆಗೆ ಆಮಂತ್ರಣದ ಕಾರ್ಡ್ ಭಿನ್ನವಾಗಿ ಮಾಡಿಸುವ ಮೂಲಕ ಸುದ್ದಿಯಾಗಿದ್ದಾರೆ.
ಆ ಕಾರ್ಡ್ ಬರೋಬ್ಬರಿ 4 ಕೆಜಿ 280 ಗ್ರಾಂ ತೂಕವಿದೆ. ಆ ಕಾರ್ಡ್‍ನ ಬೆಲೆ ಏನಾದರು ಕೇಳಿದರೆ ಹೀಗೂ ಉಂಟೆ ಎಂದು ಹೇಳುವುದು ಪಕ್ಕಾ.
ಗುಜರಾತಿ ಉದ್ಯಮಿ ಮೌಲೇಶಭಾಯ್ ಉಕಾನಿ, ಸೋನಾಲ್ಬೆನ್ ಉಕಾನಿ ಮಗ ಜೇ ಉಕಾನಿ ಅವರ ವಿವಾಹಕ್ಕಾಗಿ 4 ಕೆಜಿ ಮತ್ತು 280 ಗ್ರಾಂ ತೂಕದ ಕಾರ್ಡ್ ಮಾಡಿಸಿದ್ದಾರೆ. ನವೆಂಬರ್ 14 ರಿಂದ 16 ರವರೆಗೆ ರಾಜಸ್ಥಾನದ ಜೋಧ್‍ಪುರದ ಉಮೈದ್ ಭವನ ಅರಮನೆಯಲ್ಲಿ ಈ ವಿವಾಹ ನಡೆದಿತ್ತು. ಈ ಮದುವೆ ಮುಗಿದು ಹೋಗಿದ್ದರೂ, ಆಮಂತ್ರಣ ಪತ್ರಿಕೆ ಬಗ್ಗೆ ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಸಾಕಷ್ಟು ಚರ್ಚೆಯಾಗುತ್ತಿದೆ.
ಭಾರೀ ತೂಕದ ಒಂದು ಕಾರ್ಡ್ ಬೆಲೆ ಬರೋಬ್ಬರಿ 7 ಸಾವಿರ ರೂಪಾಯಿ…! ಈ ಕಾರ್ಡ್ ಗುಲಾಬಿ ಬಣ್ಣದ ಬಾಕ್ಸ್ ನಲ್ಲಿ ಇದ್ದು, ಈ ಕಾರ್ಡ್ ತೆರೆದ ನಂತರ, ಅದರಲ್ಲಿ ಮಸ್ಲಿನ್ ಬಟ್ಟೆಯಲ್ಲಿ ಸುತ್ತುವ ನಾಲ್ಕು ಸಣ್ಣ ಪೆಟ್ಟಿಗೆಗಳನ್ನು ಕಾಣಬಹುದು. ಈ ನಾಲ್ಕೂ ಪೆಟ್ಟಿಗೆಯಲ್ಲಿ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ, ಚಾಕಲೇಟ್‍ಗಳನ್ನು ತುಂಬಲಾಗಿದೆ.
ಅಲ್ಲದೇ ಇದರೊಳಗೆ 7 ಪುಟಗಳಿದ್ದು, ಅದರಲ್ಲಿ ಮದುವೆಯ ಸಂಭ್ರಮದ ಎಲ್ಲ ವಿವರಗಳಿವೆ. ಉಕನಿ ಶ್ರೀಕೃಷ್ಣನ ಅಪಾರ ಭಕ್ತನಾಗಿರುವುದರಿಂದ ಕೃಷ್ಣನ ಚಿತ್ರವನ್ನು ಹಾಕಲಾಗಿದೆ.
ಈ ಮದುವೆ ರಾಜಮನೆತನಕ್ಕೆ ಸೇರಿದ ದುಬಾರಿ ಹೋಟೆಲ್‍ಗಳಲ್ಲಿ ಒಂದಾದ ಜೋಧ್‍ಪುರದ ‘ಉಮೈದ್ ಭವನ್ ಪ್ಯಾಲೇಸ್’ ನಲ್ಲಿ ನಡೆದಿದೆ. ಈ ಮದುವೆಯ ಔತಣಕೂಟದಲ್ಲಿ ಅತಿಥಿಗಳಿಗೆ ಬಡಿಸಿದ ತಟ್ಟೆಯ ಬೆಲೆ 18,000 ರೂ. ಗಳಂತೆ. ಆದರೆ ಇಲ್ಲಿ ಈ ಮದುವೆ ಐಷಾರಾಮಿಗಿಂತ ಹೆಚ್ಚಾಗಿ ಮದುವೆ ಕಾರ್ಡ್‌ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

1 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement