
ಬೆಂಗಳೂರು: ಬೆಂಗಳೂರಿನಲ್ಲಿ ಪ್ರತಿಷ್ಠಿತ ಉತ್ತರ ಕನ್ನಡ ಸಂಘ(ರಿ)ದ ಸರ್ವ ಸದಸ್ಯರ 42ನೇ ವಾರ್ಷಿಕ ಮಹಾ ಸಭೆಯು ಅಧ್ಯಕ್ಷರಾದ ವಿಜಯ ಕಾಮತ ಅಧ್ಯಕ್ಷತೆಯಲ್ಲಿ ಉತ್ತರ ಕನ್ನಡ ಭವನದಲ್ಲಿ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ನೂತನ ಕಾರ್ಯಕಾರಿ ಸಮಿತಿಗೆ 19 ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾದ ಅರುಣ ಪ್ರಭು ಅವರು ಭಗವಂತನ ಸ್ತುತಿಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಮಂಜುನಾಥ ಶೆಟ್ಟಿ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಿದರು. ಸಂಘದ ಖಜಾಂಚಿ ಕಿರಣ ನಾಯಕ ಅವರು ಪರಿಶೋಧಿಸಲ್ಪಟ್ಟ ಲೆಕ್ಕಪತ್ರ ಮತ್ತು ಉದ್ದೇಶಿತ ಮುಂಗಡ ಪತ್ರವನ್ನು ಮಂಡಿಸಿದರು. ಕಾರ್ಯಕಾರಿ ಸಮಿತಿಯ ನಡೆದ ಚುನಾವಣೆಯಲ್ಲಿ ಒಟ್ಟು 19 ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾದವರು. ಚುನಾವಣಾ ಅಧಿಕಾರಿಯವರು ಅಧಿಕೃತ ಫಲಿತಾಂಶ ಪ್ರಕಟಿಸಿದರು.
ಕಾರ್ಯಕಾರಿ ಮಂಡಳಿಗೆ ಅವಿರೋಧವಾಗಿ ಆಯ್ಕೆಯಾದವರು ಹೆಸರು ಇಂತಿದೆ.
ಬನವಾಸಿ ಕೃಷ್ಣಮೂರ್ತಿ
ವೆಂಕಟೇಶ ಡಿ.ಶೆಟ್ಟಿ
ಮೋಹನಕೃಷ್ಣ ಕೋಳ್ವೇಕರ
ಅರುಣ ಪಿ. ಪ್ರಭು
ಕೃಷ್ಣಮೂರ್ತಿ ಆರ್.ನಾಯಕ
ಅರವಿಂದ ಎನ್.ನಾಯಕ
ಮಂಜುನಾಥ ಪಿ.ಶೆಟ್ಟ
ಕಿರಣ ಡಿ.ನಾಯಕ
ಗಣು ನಾಯ್ಕ
ಕೃಷ್ಣಾನಂದ ಮಾವಿನಕುರ್ವೆ
ಸಂತೋಷ ಕೆ.ನಾಯ್ಕ
ಶ್ರೀಧರ ಯಾಜಿ
ವಸಂತ ಎನ್.ನಾಯಕ
ಪ್ರಶಾಂತ ಗಣೇಶ ಬಾಲ್ಸೇಕರ
ಗೋಪಾಲ ಕೃಷ್ಣಾಜೀ
ಎಚ್.ಎಂ.ರಾಘವೇಂದ್ರ
ಜಗದೀಶ ಜಿ.ನಾಯ್ಕ
ಜ್ಯೋತಿ ಸಂತೋಷ ಮೇಸ್ತ
ದೀಪಾ ಎಸ್.ನಾಯಕ
ಸಂಘದ ಹಿರಿಯ ಉಪಾಧ್ಯಕ್ಷರಾದ ಅರವಿಂದ ನಾಯಕ ಅವರು ವಂದಿಸಿದರು.



ನಿಮ್ಮ ಕಾಮೆಂಟ್ ಬರೆಯಿರಿ