ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ ಅಪಘಾತ..!

ಚೆನ್ನೈ:ಭಾರತೀಯ ವಾಯುಪಡೆಯ (ಐಎಎಫ್) ಹೆಲಿಕಾಪ್ಟರ್ ಅಪಘಾತಕ್ಕೀಡಾದವರ ಮೃತದೇಹಗಳನ್ನು ಹೊತ್ತೊಯ್ಯುತ್ತಿದ್ದ ಬೆಂಗಾವಲು ವಾಹನದ ಒಂದು ಭಾಗವಾದ ಆಂಬ್ಯುಲೆನ್ಸ್ ಮತ್ತು ಪೊಲೀಸ್ ವ್ಯಾನ್ ವೆಲ್ಲಿಂಗ್ಟನ್‌ನಿಂದ ತಮಿಳುನಾಡಿನ ಸೂಲೂರಿಗೆ ತೆರಳುತ್ತಿದ್ದಾಗ ಅಪಘಾತಕ್ಕೀಡಾಯಿತು.
ಬುಧವಾರ ಮಧ್ಯಾಹ್ನ ಕೂನೂರು ಬಳಿ ಐಎಎಫ್ ಹೆಲಿಕಾಪ್ಟರ್ ಪತನಗೊಂಡ ದುರಂತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಜನರು ಮೃತಪಟ್ಟಿದ್ದಾರೆ.
ಅವರ ಮೃತದೇಹಗಳನ್ನು ಗುರುವಾರ ಬೆಳಗ್ಗೆ ವೆಲ್ಲಿಂಗ್ಟನ್‌ನಲ್ಲಿರುವ ಮದ್ರಾಸ್ ರೆಜಿಮೆಂಟಲ್ ಸೆಂಟರ್‌ (ಎಂಆರ್‌ಸಿ) ಸೇನಾ ಆಸ್ಪತ್ರೆಯಿಂದ ಸ್ಥಳಾಂತರಿಸಲಾಗಿದ್ದು, ತೆಲಂಗಾಣ ರಾಜ್ಯಪಾಲ ಮತ್ತು ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ, ಹಿರಿಯ ಸೇನಾಧಿಕಾರಿಗಳು ಮತ್ತು ಇತರರು ಅಗಲಿದ ಆತ್ಮಗಳಿಗೆ ಅಂತಿಮ ನಮನ ಸಲ್ಲಿಸಿದರು
ನಂತರ ಅಂಬ್ಯುಲೆನ್ಸ್‌ಗಳು ಮತ್ತು ಭದ್ರತಾ ವಾಹನಗಳ ಬೆಂಗಾವಲು ವೆಲ್ಲಿಂಗ್‌ಟನ್‌ನಿಂದ ಸೂಲೂರು ವಾಯುನೆಲೆಗೆ ಪ್ರಯಾಣಿಸುತ್ತಿದ್ದಾಗ, ಪೊಲೀಸ್ ವಾಹನದ ಆಕ್ಸಲ್ ಮುರಿದುಹೋಯಿತು. ಈ ವೇಳೆ ವ್ಯಾನ್ ಚಾಲಕ ವಾಹನ ನಿಲ್ಲಿಸಿ ರಸ್ತೆ ಬದಿಯ ಗೋಡೆಗೆ ಡಿಕ್ಕಿ ಹೊಡೆದಿದ್ದಾನೆ.
ಏಳು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಮೆಟ್ಟುಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವು ನಿಮಿಷಗಳ ನಂತರ, ಪಾರ್ಥಿವ ಶರೀರವನ್ನು ಹೊತ್ತೊಯ್ಯುತ್ತಿದ್ದ ಒಂದು ಅಂಬುಲೆನ್ಸ್‌ ಸಹ ಸಣ್ಣ ಅಪಘಾತಕ್ಕೀಡಾಯಿತು. ನಂತರ ಅಂಬ್ಯುಲೆನ್ಸ್‌ನಲ್ಲಿದ್ದ ಮೃತದೇಹಗಳನ್ನು ಮತ್ತೊಂದು ಆಂಬ್ಯುಲೆನ್ಸ್‌ಗೆ ಸ್ಥಳಾಂತರಿಸಲಾಯಿತು ಮತ್ತು ವಾಹನಗಳು ಸೂಲೂರು ವಾಯುನೆಲೆಯತ್ತ ಸಾಗಿದವು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement