ದೇಶದ ಅಪರೂಪದ ಅಶ್ವತ್ಥಾಮ ಮಂದಿರದ ಮೂರ್ತಿ ಕಳ್ಳನ ಬಂಧನ

ಬೆಳಗಾವಿ: ಕಳ್ಳತನವಾಗಿದ್ದ ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯ ವ್ಯಾಪ್ತಿಯ ಪಾಂಗುಳ ಗಲ್ಲಿಯಲ್ಲಿ ಇರುವ ದೇಶದ ಅಪರೂಪದ ಅಶ್ವತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ವಶಪಡಿಸಿಕೊಳ್ಳಲಾಗಿದ್ದು. ಈ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ.
ಡಿಸೆಂಬರ್‌ 7ರಂದು ತ್ಥಾಮ ಮಂದಿರದ ದೇವರ ಬೆಳ್ಳಿಯ ಮುಖದ ಮೂರ್ತಿ ಕಳ್ಳತನವಾಗಿತ್ತು. ಈ ಬಗ್ಗೆ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದರು. ಕಳ್ಳರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ತುಳಸಿಗೇರಿ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಒಬ್ಬನನ್ನು ಬಂಧಿಸಿದೆ. ಬಂಧೀತ ಆರೋಪಿತನಿಂದ 2 ಕೆ.ಜಿ 190 ಗ್ರಾಂ ಬೆಳ್ಳಿ ಮೂರ್ತಿ, 1,30,000 ರೂ.ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

0 / 5. 0

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

ನಿಮ್ಮ ಕಾಮೆಂಟ್ ಬರೆಯಿರಿ

advertisement