ಬಾಲ್ಯದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲು ಕಿರಿಯಪುತ್ರ ತೇಜಸ್ವಿ ಯಾದವ್

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರ, ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ತಮ್ಮ ಬಹುದಿನಗಳ ಕಾಲೇಜ್ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ವರದಿಗಳ ಪ್ರಕಾರ, ತೇಜಸ್ವಿ ಯಾದವ್ ಹರಿಯಾಣ ಮೂಲದ ತಮ್ಮ ಬಾಲ್ಯದ ಗೆಳತಿ  ರೇಚೆಲ್  ಐರಿಸ್‌  ಅವರನ್ನು ಗುರುವಾರ ನವದೆಹಲಿಯಲ್ಲಿ ವಿವಾಹವಾಗಿದ್ದಾರೆ. ರೇಚಲ್‌ ಐರಿಸ್‌ ಮತ್ತು ತೇಜಸ್ವಿ ಇಬ್ಬರೂ ದೆಹಲಿಯ ಆರ್‍ಕೆ ಪುರಂನಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಒಂದೇ ತರಗತಿಯಲ್ಲಿ ಓದುತ್ತಿದ್ದರು ಮತ್ತು ಈಗ 6-7 ವರ್ಷಗಳಿಂದ ಸ್ನೇಹಿತರಾಗಿದ್ದರು ಎಂದು ತಿಳಿದು ಬಂದಿದೆ.
ಗುರುವಾರ ಬೆಳಗ್ಗೆಯೇ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಮದುವೆ ವಿಚಾರದಲ್ಲಿ ಗೌಪ್ಯತೆ ಕಾಪಾಡಿಕೊಂಡಿತ್ತು. ಆದರೆ  ರೋಹಿಣಿ  ಎಂಬವರು ತಮ್ಮ ಟ್ವೀಟ್ ನಲ್ಲಿ ವಿವಾಹದ ಫೋಟೋ ಹಂಚಿಕೊಂಡು ಶುಭಾಶಯ ಕೋರಿದಾಗ ಮದುವೆ ವಿಚಾರ ಬಹಿರಂಗವಾಗಿದೆ.

ನಾನು ನಿನ್ನ ಮದುವೆಯಲ್ಲಿ ಇಲ್ಲ. ಆದರೆ ನನ್ನ ಆಶೀರ್ವಾದ ನಿಮ್ಮಿಬ್ಬರ ಮೇಲಿದೆ. ಟುಟು ಮತ್ತು ರಾಚೆಲ್‍ಗೆ ಮದುವೆಯ ಶುಭಾಶಯಗಳು ನಿಮ್ಮಿಬ್ಬರ ಜೀವನ ಉಸಿರಿರುವವರೆಗೂ ಸಂತೋಷವಾಗಿರಲೆಂದು ಆಶಿಸುತ್ತೇನೆ ಎಂದು ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement