ಉತ್ತರ ಪ್ರದೇಶದ ಬಲರಾಂಪುರದಲ್ಲಿ ಸರಯೂ ನಹರ್ ರಾಷ್ಟ್ರೀಯ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

ಬಲರಾಂಪುರ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಶನಿವಾರ ಬಲರಾಂಪುರದಲ್ಲಿ ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನು ಉದ್ಘಾಟಿಸಿದರು. 9,800 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಈ ಪ್ರದೇಶದ ಜಲಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಐದು ನದಿಗಳಾದ ಘಘರಾ, ಸರಯು, ರಾಪ್ತಿ, ಬಂಗಂಗಾ ಮತ್ತು ರೋಹಿಣಿಗಳನ್ನು ಪರಸ್ಪರ ಜೋಡಿಸುವುದನ್ನು ಒಳಗೊಂಡಿರುತ್ತದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಪ್ರಧಾನಿಯವರು ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನು ಪರಿಶೀಲಿಸಿದರು. ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಕಾರ, ಈ ಯೋಜನೆಯು 14 ಲಕ್ಷ ಹೆಕ್ಟೇರ್ ಭೂಮಿಗೆ ನೀರನ್ನು ಒದಗಿಸುತ್ತದೆ ಮತ್ತು 6200 ಕ್ಕೂ ಹೆಚ್ಚು ಹಳ್ಳಿಗಳ ಸುಮಾರು 29 ಲಕ್ಷ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯು ಪೂರ್ವ ಉತ್ತರ ಪ್ರದೇಶದ ಒಂಬತ್ತು ಜಿಲ್ಲೆಗಳಿಗೆ ಪ್ರಯೋಜನ ನೀಡಲಿದೆ.

ನಾವು ಅಯೋಧ್ಯೆಯಲ್ಲಿ ರಾಮಮಂದಿರದ ಬಗ್ಗೆ ಮಾತನಾಡುವಾಗ, ಬಲರಾಂಪುರ್ ಸಂಸ್ಥಾನದ (ಹಿಂದಿನ) ಮಹಾರಾಜ ಪಟೇಶ್ವರಿ ಪ್ರಸಾದ್ ಸಿಂಗ್ ಸಾಹೇಬ್ ಅವರ ಕೊಡುಗೆಯನ್ನು ಉಲ್ಲೇಖಿಸಲಾಗುತ್ತದೆ. ಬಲರಾಂಪುರದ ಜನರು ಅಭಿಜ್ಞರು, ಅವರು ನಾನಾಜಿ ದೇಶಮುಖ್ ಮತ್ತು ಅಟಲ್ ಬಿಹಾರಿ ವಾಜಪೇಯಿ ರೂಪದಲ್ಲಿ ಎರಡು ಭಾರತ ರತ್ನಗಳನ್ನು ನೀಡಿದರು ಎಂದು ಪ್ರಧಾನಿ ಮೋದಿ ಹೇಳಿದರು.
ದಿವಂಗತ ಜನರಲ್ ಬಿಪಿನ್ ರಾವತ್ ಮತ್ತು ಡಿಸೆಂಬರ್ 8 ರ ಹೆಲಿಕಾಪ್ಟರ್ ಅಪಘಾತದ ಇತರ ಸಾವುನೋವುಗಳ ಬಗ್ಗೆ ಮಾತನಾಡುತ್ತಾ, ಪ್ರಧಾನ ಮಂತ್ರಿಯವರು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. “ಭಾರತದ ಮೊದಲ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ನಿಧನವು ಪ್ರತಿಯೊಬ್ಬ ದೇಶಭಕ್ತರಿಗೂ ನಷ್ಟವಾಗಿದೆ. ಅವರು ಧೈರ್ಯಶಾಲಿ ಮತ್ತು ದೇಶದ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಯಾಗಿಸಲು ಶ್ರಮಿಸಿದರು, ಅದಕ್ಕೆ ರಾಷ್ಟ್ರವೇ ಸಾಕ್ಷಿ” ಎಂದು ಅವರು ಹೇಳಿದರು.
ಜನರಲ್ ಬಿಪಿನ್ ರಾವತ್ ಎಲ್ಲೇ ಇರಲಿ, ಮುಂಬರುವ ದಿನಗಳಲ್ಲಿ, ಭಾರತವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುವುದನ್ನು ಅವರು ನೋಡುತ್ತಾರೆ” ಎಂದು ಅವರು ಹೇಳಿದರು.
ಭಾರತ ಶೋಕಿಸುತ್ತಿದೆ ಆದರೆ ನೋವಿನಲ್ಲಿದ್ದರೂ, ನಾವು ನಮ್ಮ ವೇಗವನ್ನು ಅಥವಾ ನಮ್ಮ ಅಭಿವೃದ್ಧಿಯನ್ನು ನಿಲ್ಲಿಸುವುದಿಲ್ಲ. ಭಾರತವು ನಿಲ್ಲುವುದಿಲ್ಲ. ಒಟ್ಟಾಗಿ, ನಾವು ಭಾರತೀಯರು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ದೇಶದ ಒಳಗೆ ಮತ್ತು ಹೊರಗೆ ಪ್ರತಿ ಸವಾಲುಗಳನ್ನು ಎದುರಿಸುತ್ತೇವೆ. ನಾವು ಭಾರತವನ್ನು ಇನ್ನಷ್ಟು ಶಕ್ತಿಯುತವಾಗಿ, ಇನ್ನಷ್ಟು ಸಮೃದ್ಧಗೊಳಿಸುತ್ತೇವೆ” ಎಂದು ಪ್ರಧಾನಿ ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ದೇಶದಲ್ಲಿ ಕೋವಿಡ್-19 ಬಿಕ್ಕಟ್ಟಿನ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಹಾಯ ಮಾಡಿದವರು ಬಿಜೆಪಿ ಕಾರ್ಯಕರ್ತರು ಮಾತ್ರ ಎಂದು ಪ್ರತಿಪಾದಿಸಿದರು.
ಇಂತಹ ಪಕ್ಷದ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಕೊರೊನಾ ಬಂದಾಗ ಎಲ್ಲಾ ಪಕ್ಷಗಳು ಕ್ವಾರಂಟೈನ್‌ಗೆ ಹೋದವು. ಅವರು ಐಸೋಲೇಶನ್‌ಗೆ ಹೋದರು. ಯಾವುದೇ ಕಾರ್ಯಕರ್ತರು ಹೊರಗೆ ಕಾಣಲಿಲ್ಲ, ಆದರೆ ಬಿಜೆಪಿ ಕಾರ್ಯಕರ್ತರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶ ಸೇವೆ ಮಾಡುತ್ತಾರೆ ಎಂದು ನಡ್ಡಾ ಹೇಳಿದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ನಾವು ಡಿಸೆಂಬರ್ 7 ರಂದು 10,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಸಿದ್ಧಾರ್ಥನಗರದಲ್ಲಿ 9 ವೈದ್ಯಕೀಯ ಕಾಲೇಜುಗಳು ಮತ್ತು ಕುಶಿನಗರದಲ್ಲಿ ಒಂದು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದೇವೆ” ಎಂದು ಅವರು ನೆನಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

ಸರಯೂ ನಹರ್ ರಾಷ್ಟ್ರೀಯ ಯೋಜನೆ: ನೀರಾವರಿ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದದ್ದು

*ಸರಯೂ ನಹರ್ ರಾಷ್ಟ್ರೀಯ ಯೋಜನೆಯನ್ನು ಒಟ್ಟು 9,800 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಪ್ರದೇಶದ ಜಲ ಸಂಪನ್ಮೂಲಗಳ ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಐದು ನದಿಗಳನ್ನು – ಘಘರಾ, ಸರಯೂ, ರಾಪ್ತಿ, ಬಂಗಂಗಾ ಮತ್ತು ರೋಹಿಣಿ ನದಿಗಳನ್ನು ಪರಸ್ಪರ ಜೋಡಿಸುವುದನ್ನು ಒಳಗೊಂಡಿದೆ.

* ಸರ್ಕಾರದ ಹೇಳಿಕೆಯ ಪ್ರಕಾರ ಪೂರ್ವ ಉತ್ತರ ಪ್ರದೇಶದ ಒಂಭತ್ತು ಜಿಲ್ಲೆಗಳಾದ ಬಹ್ರೈಚ್, ಶ್ರಾವಸ್ತಿ, ಬಲ್ರಾಮ್‌ಪುರ್, ಗೊಂಡಾ, ಸಿದ್ಧಾರ್ಥನಗರ, ಬಸ್ತಿ, ಸಂತ ಕಬೀರ್ ನಗರ, ಗೋರಖಪುರ ಮತ್ತು ಮಹಾರಾಜ್‌ಗಂಜ್‌ಗಳಿಗೆ ಇದು ಪ್ರಯೋಜನ ನೀಡುತ್ತದೆ. ಈ ಯೋಜನೆಯನ್ನು 2016 ರಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ ತರಲಾಯಿತು, ಇದನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪಿಎಂಒ ಹೇಳಿಕೆಯಲ್ಲಿ ತಿಳಿಸಲಾಗಿದೆ.

*1972ರಲ್ಲಿ ಅನುಮೋದನೆ ಪಡೆದು 1978ರಲ್ಲಿ ಸಣ್ಣ ಪ್ರಮಾಣದಲ್ಲಿ ಎರಡು ಜಿಲ್ಲೆಗಳಿಗೆ ನೀರಾವರಿಗಾಗಿ 78.68 ಕೋಟಿ ರೂ.ವೆಚ್ಚದಲ್ಲಿ ಅಂದಿನ ರಾಜ್ಯ ಸರಕಾರ ಯೋಜನೆ ಆರಂಭಿಸಿತ್ತು. ನಾಲ್ಕು ವರ್ಷಗಳ ನಂತರ 9 ಜಿಲ್ಲೆಗಳಿಗೆ ವಿಸ್ತರಿಸಲಾಯಿತು. 2021 ರ ವೇಳೆಗೆ, ಯೋಜನಾ ವೆಚ್ಚವನ್ನು 9,802 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಯಿತು ಮತ್ತು ಯೋಜನೆಯ ಹೆಸರನ್ನು ಸರ್ಯಾ ಕಾಲುವೆ ರಾಷ್ಟ್ರೀಯ ಯೋಜನೆ ಎಂದು ಬದಲಾಯಿಸಲಾಯಿತು.

*ಹಿಂದಿನ ಆಡಳಿತಗಳ ವಿರುದ್ಧ ಕಿಡಿಕಾರಿರುವ ಪ್ರಧಾನಿ, ಟ್ವೀಟ್‌ನಲ್ಲಿ, “ಸರಯೂ ನಹರ್ ರಾಷ್ಟ್ರೀಯ ಯೋಜನೆಯ ಕೆಲಸವು 1978 ರಲ್ಲಿ ಪ್ರಾರಂಭವಾಯಿತು ಎಂದು ತಿಳಿದರೆ ನೀವು ಆಘಾತಕ್ಕೊಳಗಾಗುತ್ತೀರಿ. ಆದರೆ ದಶಕಗಳ ವರೆಗೆ ಯೋಜನೆಯು ಪೂರ್ಣಗೊಂಡಿಲ್ಲ. ವೆಚ್ಚಗಳು ಹೆಚ್ಚಾಯಿತು ಮತ್ತು ನಾಲ್ಕು ದಶಕಗಳಿಂದ ಅಪೂರ್ಣವಾಗಿದ್ದ ಯೋಜನೆಯನ್ನು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ.

*ನಾಲ್ಕು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಸರಯೂ ನಹರ್ ರಾಷ್ಟ್ರೀಯ ಯೋಜನೆಯ ಮೂರನೇ ನಾಲ್ಕು ಭಾಗಕ್ಕಿಂತ ಹೆಚ್ಚು ಕೆಲಸಗಳು ತಮ್ಮ ಆಡಳಿತದಲ್ಲಿ ಪೂರ್ಣವಾಗಿದೆ ಮತ್ತು ಪ್ರಸ್ತುತ ಭಾರತೀಯ ಜನತಾ ಪಕ್ಷದ ಸರ್ಕಾರವು ಉಳಿದ ಕೆಲಸವನ್ನು ಪೂರ್ಣಗೊಳಿಸಲು 5ವರ್ಷಕ್ಕೂ ಹೆಚ್ಚು ಸಮಯವನ್ನು ತೆಗೆದುಕೊಂಡಿದೆ ಎಂದು ಅಖಿಲೇಶ್ ಯಾದವ್‌ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿ 2022 ರಲ್ಲಿ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಮುಖ ಸುದ್ದಿ :-   ಎಎಪಿ ನಾಯಕಿ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ದೆಹಲಿ ಸಿಎಂ ಕೇಜ್ರಿವಾಲ್ ಆಪ್ತ ಸಹಾಯಕನ ವಿರುದ್ಧ ಎಫ್‌ಐಆರ್ ದಾಖಲು

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement