ಬೆಳಗಾವಿಯಲ್ಲಿ ವಿಧಾನ ಮಂಡಲದ ಅಧಿವೇಶನ: ತಾತ್ಕಾಲಿಕ ಪೊಲೀಸ್ ಟೌನ್ ಶಿಪ್ ನಿರ್ಮಾಣ, ವಾಸ್ತವ್ಯಕ್ಕೆ ವ್ಯವಸ್ಥೆ

ಬೆಳಗಾವಿ :ಡಿಸೆಂಬರ್13 ರಿಂದ 24ರ ವರೆಗೆ ಬೆಳಗಾವಿಯಲ್ಲಿ ಚಳಗಾಲದ ವಿಧಾನ ಮಂಡಲದ ಅಧಿವೇಶನ ನಡೆಯಲಿದ್ದು , ಈ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಘಟಕದ ವತಿಯಿಂದ ಪೂರ್ವ ಸಿದ್ಧತೆ ನಡೆಸಲಾಗುತ್ತಿದೆ.
ಅಧಿವೇಶನದ ಕುರಿತು ಬೆಳಗಾವಿ ನಗರ ಪೊಲೀಸ್ ಹೊರತುಪಡಿಸಿ ಹೊರ ಜಿಲ್ಲೆಗಳಿಂದ ಸುಮಾರು 4000 ಪೊಲೀಸ್ ಸಿಬ್ಬಂದಿ, 300 ಪೊಲೀಸ್ ಅಧಿಕಾರಿಗಳು ಹಾಗೂ 50 ಪೊಲೀಸ್ ಹಿರಿಯ ಅಧಿಕಾರಿಗಳನ್ನು ಬಂದೋಬಸ್ತ್ ಕುರಿತು ನಿಯೋಜನೆ ಮಾಡಲಾಗುತ್ತಿದೆ. ಸುವರ್ಣ ವಿಧಾನ ಸೌಧದ ಹತ್ತಿರ ನಿಲಜಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಸಿಂದೋಳ್ಳಿಯಲ್ಲಿ ತಾತ್ಕಾಲಿಕವಾಗಿ ಪೊಲೀಸ್ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದ್ದು, ಅಲ್ಲಿ 1500 ಜನ ಸಿಬ್ಬಂದಿಗೆ, 300 ಅಧಿಕಾರಿಗಳಿಗೆ ವಾಸ್ತವ್ಯಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತಿದೆ .
ತಾತ್ಕಾಲಿಕ ಟೌನ್ ಶಿಪ್‌ನಲ್ಲಿ ವಿದ್ಯುತ್ ವ್ಯವಸ್ಥೆ , ಆಸ್ಪತ್ರೆ , ಆಫೀಸ್ , ಕಂಟ್ರೋಲ್ ರೂಮ್ , ಡೈನಿಂಗ್ ಹಾಲ್ , ಶೌಚಾಲಯ , ಸ್ನಾನಗೃಹ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿ ಮಾಡಲಾಗುತ್ತಿದೆ. ಇದನ್ನು ಹೊರತುಪಡಿಸಿ ಏರ್ಮೆನ್ ಟ್ರೇನಿಂಗ್ ಸ್ಕೂಲ್ ಸಾಂಬ್ರಾದಲ್ಲಿ 500 ಜನ ಅಧಿಕಾರಿ / ಸಿಬ್ಬಂದಿಗೆ ವಾಸ್ತವ್ಯ , ಎಂಎಲ್‌ಐಆರ್‌ಸಿ ಕ್ಯಾಂಪ್‌ನಲ್ಲಿ 400 ಜನಕ್ಕೆ ವಾಸ್ತವ್ಯ ಮತ್ತು ಸುಮಾರು 250 ಮಹಿಳಾ ಅಧಿಕಾರಿ / ಸಿಬ್ಬಂದಿಗೆ ಕೆಎಸ್‌ಆರ್‌ಪಿ ಮಚ್ಚೆಯಲ್ಲಿ ಹಾಗೂ ಪಿಟಿಎಸ್ ಕಂಗ್ರಾಳಿಯಲ್ಲಿ ಸುಮಾರು 350 ಜನರಿಗೆ ವಾಸ್ತವ್ಯ ಹಾಗೂ ಇನ್ನಿತರ ಸ್ಥಳಗಳಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.
ಊಟ ಮತ್ತು ಬಿಸಿನೀರಿನ ವ್ಯವಸ್ಥೆ ಸಹ ಮಾಡಲಾಗುತ್ತಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement