ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು ಆದರೆ ಈಗ ಅದನ್ನು ಸರಿಪಡಿಸಿ ಪುನಃ ಸ್ಥಾಪಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಖಾತೆಯನ್ನು ಶನಿವಾರ ರಾತ್ರಿ ಹ್ಯಾಕ್ ಮಾಡಿದ ಹ್ಯಾಕರ್ಗಳು ಬಿಟ್ ಕಾಯಿನ್ ಸಂಬಂಧಿಸಿದಂತೆ ಅದರಿಂದ ಟ್ವೀಟ್ ಮಾಡಿದ್ದಾರೆ. ಆದರೆ ಪ್ರಧಾನಿ ಖಾತೆಯಿಂದ ಕೂಡಲೇ ಟ್ವಿಟರ್ ಕಂಪನಿಗೆ ಮಾಹಿತಿ ನೀಡಿದ್ದು, ಟ್ವಿಟರ್ ಸಂಸ್ಥೆ ತಕ್ಷಣವೇ ಪ್ರಧಾನಿ ಮೋದಿ ಟ್ವಿಟರ್ ಖಾತೆಯನ್ನು ಪುನಃ ಸ್ಥಾಪಿಸಿದೆ(Restored).
ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ ಸರಿಪಡಿಸಲಾಗಿದೆ. ಈ ಹಿಂದೆ ಮಾಡಿರುವ ಟ್ವೀಟ್ ಅನ್ನು ಪರಿಗಣಿಸದಂತೆ ತಿಳಿಸಲಾಗಿದೆ. ಬಿಟ್ ಕಾಯಿನ್ ಸಂಬಂಧ ಲಿಂಕ್ ಬಂದರೆ ಪರಿಗಣಿಸಬೇಡಿ ಎಂದು ಪ್ರಧಾನ ಮಂತ್ರಿ ಕಚೇರಿ ಟ್ವಿಟರ್ ಖಾತೆಯಿಂದ ತಿಳಿಸಿದೆ.
ಶನಿವಾರ ರಾತ್ರಿ ಕೆಲ ಸಮಯದ ವರೆಗೆ ಪ್ರಧಾನಿ ಮೋದಿ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಪ್ರಧಾನಿ ಟ್ವಿಟರ್ ಖಾತೆಯಿಂದ ‘ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ, ಸರ್ಕಾರ ಅಧಿಕೃತವಾಗಿ 500 ಬಿಟ್ ಕಾಯಿನ್ ಖರೀದಿಸಿದೆ, ಅವುಗಳನ್ನು ದೇಶದ ಪ್ರಜೆಗಳಿಗೆ ಹಂಚಲಾಗುವುದು ಎಂದು ಪ್ರಧಾನಿ ಮೋದಿ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಹ್ಯಾಕ್ ಆಗಿದ್ದನ್ನು ಕಂಡುಕೊಂಡ ಪಿಎಂಒ ತಕ್ಷಣವೇ ಟ್ವಿಟ್ಟರ್ ಕಂಪನಿಗೆ ಮಾಹಿತಿ ನೀಡಿತ್ತು. ಈಗ ಟ್ವೀಟ್ಟರ್ ಖಾತೆ ಸರಿಪಡಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ