ಬಿಟ್‌ ಕಾಯಿನ್‌ ಹಗರಣದ ಆರೋಪಿ ಶ್ರೀಕಿ ನಾಪತ್ತೆ

ಬೆಂಗಳೂರು: ತನ್ನ ಹ್ಯಾಕಿಂಗ್ ಕೌಶಲ್ಯದಿಂದ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಹ್ಯಾಕರ್ ಶ್ರೀಕಿ ಮತ್ತೊಮ್ಮೆ ಈಗ ಮತ್ತೊಮ್ಮೆ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್‌ ಮೂಲಗಳು ಉಲ್ಲೇಖಿಸಿ ಹಲವು ಹಲವು ವರದಿಗಳು ತಿಳಿಸಿವೆ.
ತಿಂಗಳ ಹಿಂದೆ ಬಿಟ್‌ಕಾಯಿನ್‌ ಹ್ಯಾಕರ್ ಆರೋಪಿ ಜೀವನಭೀಮಾ ನಗರ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ ಶ್ರೀಕಿ ಷರತ್ತು ಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವುದು ಸೇರಿದಂತೆ ಹಲವು ಷರತ್ತುಗಳ ಜೊತೆ ಜಾಮೀನು ನೀಡಲಾಗಿತ್ತು. ಆದರೆ ಜಾಮೀನು ಪಡೆದು ಜೈಲಿನಿಂದ ಹೊರಬಂದ ಶ್ರೀಕಿ ನಾಪತ್ತೆಯಾಗಿದ್ದು ಪೊಲೀಸ್‌ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿಗಳು ತಿಳಿಸಿವೆ.
ಒಂದು ವಾರದಿಂದ ಇಲ್ಲದ ಶ್ರೀಕಿ ಜಾಮೀನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲ ದಿನಗಳ ಹಿಂದೆ ಬಿಟ್ ಕಾಯಿನ್ ಬಗ್ಗೆ ಸಂಪೂರ್ಣ ಮಾಹಿತಿ ಇರುವ ಶ್ರೀಕಿ ಜೀವಕ್ಕೆ ಅಪಾಯವಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ಧರಾಮಯ್ಯ ದೂರಿದ್ದರು. ಇದೇ ಕಾರಣಕ್ಕೆ ಶ್ರೀಕಿಗೆ ಇನ್ಸಪೆಕ್ಟರ್ ನೇತೃತ್ವದಲ್ಲಿ ಭದ್ರತೆ ಒದಗಿಸಲಾಗಿತ್ತು. ಆದರೆ ಭದ್ರತೆ ಒದಗಿಸಲಾಗಿದ್ದರೂ ಆ ಇನ್ಸ್ಪೆಕ್ಟರ್ ಸಂಪರ್ಕಕ್ಕೂ ಸಿಗುತ್ತಿಲ್ಲ ಎನ್ನಲಾಗಿದೆ.
ಜಾಮೀನು ಪಡೆಯುತ್ತಿದ್ದಂತೆ ತಂದೆಯನ್ನು ಭೇಟಿ ಮಾಡಿದ್ದ ಶ್ರೀಕಿ ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದ್ದ ಶ್ರೀಕಿ ಆ ಬಳಿಕ ಪೊಲೀಸರಿಗೆ ಸಿಕ್ಕಿಲ್ಲ.
ಇತ್ತೀಚಿಗೆ ಶ್ರೀಕಿ ಲ್ಯಾಪ್ ಟ್ಯಾಪ್ ತನಿಖೆಗೊಳಪಡಿಸುವ ವೇಳೆ ಪೊಲೀಸರಿಗೆ ಫಾಸ್ ವರ್ಡ್ ಸಮಸ್ಯೆ ಎದುರಾಗಿತ್ತು. ಈ ವೇಳೆಯೂ ಪೊಲೀಸರು ಶ್ರೀಕಿಯನ್ನು ಸಂಪರ್ಕಿಸುವ ಪ್ರಯತ್ನ ಮಾಡಿದ್ದರು. ಆದರೆ ಸಿಕ್ಕಿರಲಿಲ್ಲ. ಶ್ರೀಕಿ ಪೊಲೀಸರ ಪಾಲಿಗೆ ತಲೆನೋವಾಗಿ ಪರಿಣಮಿಸಿದ್ದು ಮತ್ತೊಮ್ಮೆ ಶ್ರೀಕಿ ಹಿಡಿಯಲು ಪೊಲೀಸರು ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement