ವಾಯುಸೇನೆ ಹೆಲಿಕಾಪ್ಟರ್ ದುರಂತ: ಉಳಿದ ನಾಲ್ವರ ಮೃತದೇಹಗಳ ಗುರುತು ಪತ್ತೆ, ನಾಳೆ ಕುಟುಂಬಗಳಿಗೆ ಹಸ್ತಾಂತರ

ನೀಲಗಿರಿ (ತಮಿಳುನಾಡು): ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ ಹನ್ನೊಂದು ಸಶಸ್ತ್ರ ಪಡೆಗಳ ಸಿಬ್ಬಂದಿ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಕೆಲವು ದಿನಗಳ ನಂತರ, ಅವರ ಪಾರ್ಥಿವ ಶರೀರದ ಡಿಎನ್‌ಎ ಪರೀಕ್ಷೆಯ ಮೂಲಕ ಮೃತರನ್ನು ಗುರುತಿಸುವ ಪ್ರಯತ್ನಗಳು ಮುಂದುವರೆದಿದೆ.
ರಾವತ್ ಅವರ ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಲಖ್ಬಿಂದರ್ ಸಿಂಗ್ ಲಿಡ್ಡರ್ ಮತ್ತು ಸ್ಟಾಫ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್ ಕೂಡ ಸತ್ತವರಲ್ಲಿ ಸೇರಿದ್ದಾರೆ. ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬದುಕುಳಿದ ಏಕೈಕ ವ್ಯಕ್ತಿಯಾಗಿದ್ದು, ಪ್ರಸ್ತುತ ಬೆಂಗಳೂರಿನ ಕಮಾಂಡ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಭಾನುವಾರ ಬೆಳಿಗ್ಗೆ ನವೀಕರಣದ ಪ್ರಕಾರ, ಇನ್ನೂ ನಾಲ್ಕು ಮೃತದೇಹವನ್ನು ಗುರುತಿಸಲಾಗಿದೆ. ಭಾರತೀಯ ಸೇನೆಯ ಪ್ರಕಾರ, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಹವಾಲ್ದಾರ ಸತ್ಪಾಲ್ ರಾಯ್, ಎನ್‌ಕೆ ಗುರ್ಸೇವಕ್ ಸಿಂಗ್ ಮತ್ತು ಎನ್‌ಕೆ ಜಿತೇಂದ್ರ ಕುಮಾರ್ ಅವರ ಪಾರ್ಥಿವ ಶರೀರವನ್ನು ನಾಳೆ ಬೆಳಿಗ್ಗೆ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ.

ಪ್ರಮುಖ ಸುದ್ದಿ :-   ಘಾಟ್‌ಕೋಪರ್‌ ಹೋರ್ಡಿಂಗ್ ಕುಸಿತ ದುರಂತ : ಉದಯಪುರದಲ್ಲಿ ಜಾಹೀರಾತು ಫಲಕದ ಮಾಲೀಕನ ಬಂಧನ

.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement