ಅಲ್ಲು ಅರ್ಜುನ್ ಚಿತ್ರದ ಐಟಂ ಸಾಂಗ್: ಸಮಂತಾ ರುತ್ ಪ್ರಭು ವಿರುದ್ಧ ಎಫ್ಐಆರ್

ಅಲ್ಲು ಅರ್ಜುನ್ ಅಭಿನಯದ ಪುಷ್ಪಾ: ದಿ ರೈಸ್ ಶುಕ್ರವಾರ, ಡಿಸೆಂಬರ್ 17 ರಂದು ದಕ್ಷಿಣ ಭಾರತದ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಪ್ರಚಾರ ಈಗಾಗಲೇ ಶುರುವಾಗಿದೆ.
ಸಮಂತಾ ರುತ್ ಪ್ರಭು ಅವರು ತಮ್ಮ ಐಟಂ ಸಾಂಗ್‌ ಮೂಲಕ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಹಾಡು ಬಿಡುಗಡೆಯಾಗಿದ್ದು, ‘ಊಅಂತವ ಊಊಅಂತವ’ ಎಂದು ಟೈಟಲ್ ಇಡಲಾಗಿತ್ತು. ಆದರೆ, ಈ ಹಾಡು ಈಗ ಸಮಂತಾಗೆ ಸಂಚಕಾರ ತಂದಿದೆ. ಪುರುಷರ ಸಂಘಟನೆಯೊಂದು ನಟಿಯ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಗೀತೆಯು ತನ್ನ ಸಾಹಿತ್ಯದಲ್ಲಿ ಪುರುಷರನ್ನು ಕಾಮಪ್ರಚೋದಕ ಎಂದು ಚಿತ್ರಿಸುತ್ತದೆ ಎಂದು ಆರೋಪಿಸಲಾಗಿದೆ. ಈ ಹಾಡನ್ನು ನಿಷೇಧಿಸುವಂತೆಯೂ ಸಂಘಟನೆ ಒತ್ತಾಯಿಸಿದೆ. ಪ್ರಕರಣ ಈಗ ಆಂಧ್ರ ಹೈಕೋರ್ಟ್‌ನಲ್ಲಿದೆ
ಏತನ್ಮಧ್ಯೆ, ಖ್ಯಾತ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ನೃತ್ಯ ಸಂಯೋಜನೆಯಲ್ಲಿ ‘ಊಅಂತವ ಊಊಅಂತವ’ ಹಾಡನ್ನು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ. ಇದು ಸಮಂತಾ ಅವರ ಮೊದಲ ಐಟಂ ಸಾಂಗ್ ಆಗಿದ್ದು, ಆಕೆಯನ್ನು ಸಿಜ್ಲಿಂಗ್ ಅವತಾರದಲ್ಲಿ ಪ್ರಸ್ತುತಪಡಿಸಲಾಗಿದೆ. ಆಂಡ್ರಿಯಾ ಜೆರೆಮಿಯಾ ಹಾಡಿನ ತಮಿಳು ಆವೃತ್ತಿಯನ್ನು ಹಾಡಿದ್ದಾರೆ, ಇಂದ್ರಾವತಿ ಚೌಹಾನ್ ಅದರ ತೆಲುಗು ಆವೃತ್ತಿಗೆ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಈ ಹಾಡನ್ನು ಮಂಗ್ಲಿ ಹಾಡಿದ್ದು, ಮಲಯಾಳಂ ಆವೃತ್ತಿಯನ್ನು ರಮ್ಯಾ ನಂಬೀಸನ್ ಹಾಡಿದ್ದಾರೆ.
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಪುಷ್ಪ: ದಿ ರೈಸ್ ಚಲನಚಿತ್ರ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆಂಪು ಚಂದನದ ಕಳ್ಳಸಾಗಣೆಯನ್ನು ಕೇಂದ್ರೀಕರಿಸುವ ಎರಡು ಭಾಗಗಳ ಸಾಹಸ ನಾಟಕವಾಗಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಮತ್ತು ಮುತ್ತಂಶೆಟ್ಟಿ ಮೀಡಿಯಾ ನಿರ್ಮಿಸಿದೆ. ಇದು ಡಿಸೆಂಬರ್ 17 ರಂದು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement