ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕಿ ತನಿಖಾಧಿಕಾರಿ ಮುಂದೆ ಹಾಜರು

ಬೆಂಗಳೂರು: ಖಾಸಗಿ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜಾಮೀನಿನ ಮೇಲೆ ಬಿಡುಗಡೆಯಾಗಿ ನಾಪತ್ತೆಯಾಗಿದ್ದ ಬಿಟ್‌ಕಾಯಿನ್‌ ಹಗರಣದ ಆರೋಪಿ ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಒಂದು ತಿಂಗಳ ಬಳಿಕ ಪೊಲೀಸರ ಮುಂದೆ ಪ್ರತ್ಯಕ್ಷನಾಗಿದ್ದಾನೆ.
ಕಳೆದ ತಿಂಗಳು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಶ್ರೀಕಿ ಕ್ಷುಲ್ಲಕ ಕಾರಣಕ್ಕಾಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಸಂಬಂಧ ಜೀವನ ಭೀಮಾನಗರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ನಂತರ ಷರತ್ತುಬದ್ಧ ಜಾಮೀನಿನ ಜೈಲಿನಿಂದ ಹೊರಬಂದಿದ್ದ ಬಿಟ್ ಕಾಯಿನ್ ದಂಧೆಯ ಕಿಂಗ್ಪಿನ್ ಶ್ರೀಕಿ ಪ್ರತಿ ೧೫ ದಿನಕ್ಕೊಮ್ಮೆ ಠಾಣೆಗೆ ಬಂದು ಸಹಿ ಹಾಕಿ ಹೋಗುವಂತೆ ಸೂಚಿಸಲಾಗಿತ್ತು. ಆದರೆ ಒಂದು ತಿಂಗಳು ಕಳೆದರೂ ಆತ ಪತ್ತೆಯಾಗಿರಲಿಲ್ಲ ಆತನ ಮನೆಗೆ ಭದ್ರತೆ ಕೈಗೊಳ್ಳಲು ಪೊಲೀಸರು ಹೋದಾಗ ಆತ ನಾಪತ್ತೆಯಾಗಿರುವುದು ಕಂಡುಬಂದಿತ್ತು.
ಅಲ್ಲಿಂದ ವಿಚಾರಣೆಗೆ ಪೊಲೀಸರ ಮುಂದೆ ಹಾಜರಾಗಿರಲಿಲ್ಲ. ಎರಡು ಬಾರಿ ಗೈರು ಹಾಜರಾದ ಕಾರಣ ಪೊಲೀಸರು ಜಾಮೀನು ರದ್ದು ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಂತೆ ನಿನ್ನೆ ಪೊಲೀಸರ ಮುಂದೆ ಶ್ರೀಕಿ ಪ್ರತ್ಯಕ್ಷವಾಗಿದ್ದಾನೆ.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement