ಆನ್‌ಲೈನ್ ಗೇಮಿಂಗ್ ಟೋಕನ್‌ ವಿವಾದ: 16 ರ ಬಾಲಕನಿಂದ 12 ವರ್ಷದ ಸೋದರ ಸಂಬಂಧಿ ಹತ್ಯೆ

ಲಡ್ನು:ಆನ್‌ಲೈನ್ ಗೇಮ್‌ಗಳ ರಿಚಾರ್ಜ್ ಟೋಕನ್ ಪಾವತಿ ವಿಚಾರದಲ್ಲಿ ನಡೆದ ಜಗಳದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ 12 ವರ್ಷದ ಸೋದರ ಸಂಬಂಧಿಯನ್ನೇ ಕತ್ತುಹಿಸುಕಿ ಕೊಲೆ ಮಾಡಿ ಹೊಲದಲ್ಲಿ ಹೂತು ಹಾಕಿರುವ ರಾಜಸ್ಥಾನದ ನಗೌರ್ ಜಿಲ್ಲೆಯ ಲಾಡ್ನುವಿನಲ್ಲಿ ಘಟನೆ ನಡೆದ ಬಗ್ಗೆ ವರದಿಯಾಗಿದೆ.
12 ವರ್ಷದ ಬಾಲಕ ನಾಪತ್ತೆಯಾಗಿರುವ ಕುರಿತು ಆತನ ಚಿಕ್ಕಪ್ಪ ದೂರು ನೀಡಿದ್ದು, ಮೊಬೈಲ್‌ನಲ್ಲಿ ಪಬ್ ಜಿ ಮತ್ತು ಇತರ ಆನ್‌ಲೈನ್ ಆಟಗಳನ್ನು ಸೋದರ ಸಂಬಂಧಿಗಳು ಒಟ್ಟಿಗೆ ಆಟವಾಡುತ್ತಿದ್ದರು ಎಂದು ಅವರು ತಿಳಿಸಿದ್ದಾರೆ. ಇದರಿಂದ ಪೊಲೀಸರು 16 ವರ್ಷದ ಬಾಲಕನನ್ನು ವಿಚಾರಣೆಗೆ ಒಳಪಡಿಸಿದಾಗ ಇಬ್ಬರೂ ಆನ್‌ಲೈನ್ ಗೇಮ್‌ಗಳನ್ನು ಆಡುವಾಗ ಹಣಕ್ಕಾಗಿ ಜಗಳವಾಡಿ ಕೊಲೆ ಮಾಡಿದ ವಿಚಾರ ಎಂಬ ವಿಚಾರ ಬೆಳಕಿಗೆ ಬಂದಿದೆ.
ಆನ್‌ಲೈನ್ ಗೇಮಿಂಗ್ ಟೋಕನ್‌ಗಳನ್ನು ಖರೀದಿಸಲು ಅವನು ತನ್ನ ಸೋದರ ಸಂಬಂಧಿಗೆ ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದು, ಅದನ್ನು ಹಿಂದಿರುಗಿಸದ ಕಾರಣಕ್ಕೆ ಜಗಳವಾಗಿ ಸಿಟ್ಟಿನ ಭರದಲ್ಲಿ 12 ವರ್ಷದ ಬಾಲಕನನ್ನು ಕೊಂದು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement