ಪರಿಷತ್‌ ಚುನಾವಣೆ: ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಬಿಜೆಪಿ ಗೆಲುವು, ಕೆಜಿಎಫ್‌ ಬಾಬು ಸೋಲು

ಪರಿಷತ್‌ ಚುನಾವಣೆ: ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರಿನಲ್ಲಿ ಬಿಜೆಪಿ ಗೆಲುವು, ಕೆಜಿಎಫ್‌ ಬಾಬು ಸೋಲು
ಬೆಂಗಳೂರು: ರಾಜ್ಯದಲ್ಲಿ ಡಿಸೆಂಬರ್ 10ರಂದು ನಡೆದಿದ್ದ ವಿಧಾನ ಪರಿಷತ್ ಚುನಾವಣೆಯಲ್ಲಿ ಚಿತ್ರದುರ್ಗ, ಚಿಕ್ಕಮಗಳೂರು, ಬೆಂಗಳೂರು ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಎಸ್.ನವೀನ್ ಅವರು ಕಾಂಗ್ರೆಸ್ ಅಭ್ಯರ್ಥಿ ಸೋಮಶೇಖರ್ ವಿರುದ್ಧ ನವೀನ್ ಗೆಲುವಿನ ನಗೆ ಬೀರಿದ್ದಾರೆ. ಸತತ ಎರಡು ಅವಧಿಯಲ್ಲಿ ಸೋತಿದ್ದ ನವೀನ್ ಮೂರನೇ ಅವಧಿಯಲ್ಲಿ ವಿಜಯ ಸಾಧಿಸಿದ್ದಾರೆ. 2626 ಮತಗಳನ್ನು ಪಡೆದಿರುವ ನವೀನ್, 364 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಚಿಕ್ಕಮಗಳೂರುರಿನಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಕೆ.ಪ್ರಾಣೇಶ್ ಅವರು ಆರು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಜಿದ್ದಾಜಿದ್ದಿನ ಕಣದಲ್ಲಿ ಫಲಿತಾಂತ ಭಾರೀ ಕುತೂಹಲ ಕೆರಳಿಸಿತ್ತು. ಬಿಜೆಪಿಯ ಪ್ರಾಣೇಶ ಅವರ ೧೧೮೮ ಮತಗಳನ್ನು ಪಡೆದರೆ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ೧೧೮೨ ಮತಗಳನ್ನು ಪಡೆದು ಪರಾಭವಗೊಂಡರು. ಗಾಯತ್ರಿ ಅವರು ಮರುಮತ ಎಣಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು ನಗರ ಪರಿಷತ್ ಚುನಾವಣೆಯಲ್ಲು ಬಿಜೆಪಿಯ ಗೋಪಿನಾಥ ರೆಡ್ಡಿ ವಿಜಯಶಾಲಿಯಾಗಿದ್ದಾರೆ.
ಸಾವಿರ ಕೋಟಿಯ ಸರದಾರ ಕಾಂಗ್ರೆಸ್‌ನ ಯೂಸೂಫ್ ಷರೀಫ್ (ಕೆಜಿಎಫ್ ಬಾಬು) ಪರಾಭವ ಗೊಂಡಿದ್ದಾರೆ. ನಾಲ್ಕು ಅಭ್ಯರ್ಥಿಗಳಿಗೆ ಸೇರಿ ಒಟ್ಟು 2,070 ಮತ ಚಲಾವಣೆಯಾಘಿತ್ತು. ಇದರಲ್ಲಿ ಬಿಜೆಪಿ ಗೋಪಿನಾಥ ರೆಡ್ಡಿ ೧೨೨೭ ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ಸಿನ ಕೆಜಿಎಫ್‌ ಬಾಬು ೮೦೩ ಮತಗಳನ್ನು ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement