ಪರಿಷತ್‌ ಚುನಾವಣೆ: ಬೆಳಗಾವಿಯಲ್ಲಿ ಕಾಂಗ್ರೆಸ್‌-ಪಕ್ಷೇತರ, ಕಲಬುರ್ಗಿ-ಬಳ್ಳಾರಿಯಲ್ಲಿ ಬಿಜೆಪಿ, ರಾಯಚೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ

ಬೆಳಗಾವಿ/ಕಲಬುರಗಿ/ಬಳ್ಳಾರಿ/ರಾಯಚೂರು: ಬೆಳಗಾವಿ ದ್ವಿಸದಸ್ಯ ಪರಿಷತ್ ಸ್ಥಾನಗಳ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಇನ್ನೊಂದು ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ.
ಮೊದಲ ಪ್ರಾಶಸ್ತ್ಯದಲ್ಲಿ ಕಾಂಗ್ರೆಸಗೆ 3715 ಮತಗಳು ಬಂದರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ 2526 ಮತಗಳು ಬಂದಿವೆ. ಬಿಜೆಪಿಯ ಮಹಾಂತೇಶ ಕವಟಗಿಮಠ ಗೆ 2454 ಮತಗಳು ಬಂದಿವೆ. ಬೆಳಗಾವಿಯ ದ್ವಿಸದಸ್ಯ ಪರಿಷತ್‌ ಚುನಾವಣೆಯಲ್ಲಿ ಬೆಳಗಾವಿಯಿಂದ ಚನ್ನರಾಜ ಹಟ್ಟಿಹೊಳಿ ಅವರು ಮೊದಲ ಅಭ್ಯರ್ಥಿಯಾಗಿ ಆಯ್ಕೆಯಾದರೆ ಎರಡನೇ ಅಭ್ಯರ್ಥಿಯಾಗಿ ಪಕ್ಷೇತರ ಲಖನ್‌ ಜಾರಕಿಹೊಳಿ ಅವರು ಆಯ್ಕೆಯಾಗಿದ್ದಾರೆ.
ಕಲಬುರಗಿ ಯಾದಗಿರಿ ಸ್ಥಳೀಯ ಸಂಸ್ಥೆಗಳಿಗೆ ನಡೆದ ವಿಧಾನ ಪರಿಷತ್ ಚುನಾವಣಾಯ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ್ 149 ಮತಗಳಿಂದ ವಿಜಯ ಶಾಲಿಯಾಗಿದ್ದಾರೆ.
ಪ್ರಥಮ ಪ್ರಾಶಸ್ತ್ಯ ಎಣಿಕೆ ಮುಕ್ತಾಯವಾಗಿದ್ದು,ಬಿಜೆಪಿ-3452 ಮತಗಳು, ಕಾಂಗ್ರೆಸ್ -3303 ಮತಗಳು ಹಾಗೂ ಪಕ್ಷೇತರ ಅಭ್ಯರ್ಥಿ-16 ಪಡಿದಿದ್ದಾರೆ. ಅದರಂತೆ 298 ಮತಗಳು ತಿರಸ್ಕೃತವಾಗಿವೆ. ಈ ಕ್ಷೇತ್ರದಲ್ಲಿ ಮರು ಆಯ್ಕೆಯಾದ ಮೊದಲ ವ್ಯಕ್ತಿ ಬಿ.ಜಿ.ಪಾಟೀಲ ಅವರಾಗಿದ್ದಾರೆ.
ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೈ.ಎಂ.ಸತೀಶ್ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಅವರಿಗಿಂತ 757 ಮತಗಳಿಂದ ಸೋಲಿಸಿದ್ದಾರೆ.
ಬಿಜೆಪಿಯ ಸತೀಶ್ ಅವರು 2659 ಮತಗಳನ್ನು ಪಡೆದರೆ, ಕೆ.ಸಿ.ಕೊಂಡಯ್ಯ ಅವರು 1902 ಮತಗಳು , ಪಕ್ಷೇತರ ಅಭ್ಯರ್ಥಿಗಳಾದ ಗಂಗಿರೆಡ್ಡಿ 4 ಮತ, ಸಿ.ಎಂ. ಮಂಜುನಾಥ ಸ್ವಾಮಿ 2 ಮತಗಳನ್ನು ಪಡೆದರು. 87 ಮತಗಳು ತಿರಸ್ಕೃತವಾದವು.
ರಾಯಚೂರು -ಕೊಪ್ಪಳ ಪರಿಷತ್‌ ಕ್ಷೇತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕಾಂಗ್ರೆಸ್ ಅಭ್ಯರ್ಥಿ ಶರಣಗೌಡ ಪಾಟೀಲ್ ಬಯ್ಯಾಪುರ ಜಯಗಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಬನಹಟ್ಟಿಗೆ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ 3369 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ 2942 ಮತಗಳನ್ನು ಪಡೆದಿದ್ದಾರೆ. 152 ಮತಗಳು ತಿರಸ್ಕೃತಗೊಂಡಿವೆ‌. ಜನಹಿತ ಪಕ್ಷದ ಅಭ್ಯರ್ಥಿ ತಿರುಪತಿ 13 ಪಡೆದರೆ, ಪಕ್ಷೇತರ ಅಭ್ಯರ್ಥಿ ನರೇಂದ್ರ ಆರ್ಯ ಕೇವಲ ಒಂದು ಪಡೆದಿದ್ದಾರೆ.
ಶರಣಗೌಡ ಪಾಟೀಲ್ ಬಯ್ಯಾಪೂರ 427 ಮತ ಅಂತರದ ಗೆಲವು ಸಾಧಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

 

 

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement