ಶೌರ್ಯ ಪ್ರಶಸ್ತಿ ಅನುದಾನ 5 ಪಟ್ಟು ಹೆಚ್ಚಳ : ಸಿಎಂ

ಬೆಳಗಾವಿ: ’ಶೌರ್ಯ ಪ್ರಶಸ್ತಿ ವಿಜೇತರಿಗೆ ರಾಜ್ಯ ಸರ್ಕಾರದಿಂದ ಒಂದು ಬಾರಿ ನೀಡುವ ನಗದು ಅನುದಾನ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ. ಪ್ರಶಸ್ತಿ ಮೊತ್ತವನ್ನು ಸರಾಸರಿ 5 ಪಟ್ಟು ಹೆಚ್ಚಳ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಭಾರತವು 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಜಯ ಸಾಧಿಸಿ 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ ಮರಾಠಾ ಲಘು ಪದಾತಿ ದಳ ಕೇಂದ್ರ (ಎಂಎಲ್‌ಐಆರ್ ಸಿ)ದಲ್ಲಿ ಗುರುವಾರ ನಡೆದ ’ವಿಜಯ ದಿವಸ’ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಪರಮವೀರ ಚಕ್ರ 25 ಲಕ್ಷ ರೂ.ನಿಂದ 1.5 ಕೋಟಿ ರೂ., ಮಹಾವೀರ ಚಕ್ರ 12 ಲಕ್ಷ ರೂ. ನಿಂದ 1 ಕೋಟಿ ರೂ., ಅಶೋಕ ಚಕ್ರ25 ಲಕ್ಷ ರೂ.ನಿಂದ 1.5 ಕೋಟಿ ರೂ., ಕೀರ್ತಿ ಚಕ್ರ 12 ಲಕ್ಷ ರೂ.ನಿಂದ 1 ಕೋಟಿ ರೂ., ವೀರ ಚಕ್ರ ಹಾಗೂ ಶೌರ್ಯ ಚಕ್ರ ತಲಾ 8 ಲಕ್ಷ ರೂ.ನಿಂದ 50ಲಕ್ಷ ರೂ. ಹಾಗೂ ಭೂಸೇನಾ, ನೌಕಾ ಸೇನಾ ಹಾಗೂ ವಾಯುಸೇನಾ ಮೆಡಲ್ ತಲಾ 2 ಲಕ್ಷ ರೂ.ನಿಂದ 15 ಲಕ್ಷ ರೂ.ಗಳಿಗೆ ಮತ್ತು ’ಮೆನ್‌ಶನ್ ಎಎನ್‌ಡಿಎಸ್ ಪ್ಯಾಚ್’ಗೆ 2 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement