ಕೊಳವೆ ಬಾವಿಗೆ ಬಿದ್ದ ಮಗು; ಸತತ 10 ಗಂಟೆಗಳ ಕಾರ್ಯಾಚರಣೆ ನಡೆಸಿ ರಕ್ಷಣೆ

ಭೋಪಾಲ್: 80 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಒಂದು ವರ್ಷದ ಹೆಣ್ಣು ಮಗುವನ್ನು ಪೊಲೀಸರು ಮತ್ತು ರಾಜ್ಯ ವಿಪತ್ತು ತುರ್ತು ಮೀಸಲು ಪಡೆ (SDERF) 10 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಛತ್ತರ್‍ಪುರ ಜಿಲ್ಲೆಯ ಗೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ಮಧ್ಯಾಹ್ನ 3:30ರ ಹೊತ್ತಿಗೆ ಕೊಳವೆ ಬಾವಿಗೆ ಬಿದ್ದ ದಿವ್ಯಾಂಶಿಯನ್ನು ಸತತ10 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಮಗುವನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಛತ್ತರ್‍ಪುರ ಜಿಲ್ಲಾಧಿಕಾರಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ತಾಯಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದಿವ್ಯಾಂಶಿ ಎಂಬ ಒಂದು ವರ್ಷದ ಮಗು ಆಟವಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ದಿವ್ಯಾಂಶಿ ನಾಪತ್ತೆಯಾಗಿದ್ದಳು. ಗಾಬರಿಗೊಂಡ ಪೋಷಕರು ಹುಡುಕಾಡಿದಾಗ ಮಗು ತೆರೆದ ಕೊಳವೆ ಬಾವಿಗೆ ಬಿದ್ದಿರುವುದು ಗೊತ್ತಾಗಿದೆ. ನಂತರ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

https://twitter.com/ANI/status/1471590958655426562?ref_src=twsrc%5Etfw%7Ctwcamp%5Etweetembed%7Ctwterm%5E1471590958655426562%7Ctwgr%5E%7Ctwcon%5Es1_&ref_url=https%3A%2F%2Fpublictv.in%2F80-ft-borewell-madhya-pradesh-ten-hours-of-effort-rescue-operatio%2F
80 ಅಡಿ ಆಳ ಇರುವ ಕೊಳವೆ ಬಾವಿಯಲ್ಲಿ, ಸುಮಾರು 15 ಅಡಿ ಆಳದಲ್ಲಿ ಮಗುವಿನ ಅಳುವ ಶಬ್ದ ಕೇಳಿಸಿದ ಪೊಲೀಸರು ಆಮ್ಲಜನಕದ ಒದಗಿಸಿದ್ದಾರೆ. ಬಳಿಕ ಗ್ವಾಲಿಯರಿನಿಂದ ಆಗಮಿಸಿದ SDERF ತಂಡವು ಕಾರ್ಯಾಚರಣೆ ಕೈಗೊಂಡಿತು. ಮೊದಲು ಕೊಳವೆ ಬಾವಿಗೆ ಸಿಸಿಟಿವಿ ಆಳವಡಿಸಿ ಮಗುವಿನ ಚಲನವಲನ ಗಮನ ವಹಿಸಲಾಯಿತು. ನಂತರ ಜೆಸಿಬಿ ಬಳಸಿ ಕೊಳವೆ ಬಾವಿಗೆ ಸಮಾನಾಂತರವಾಗಿ ಗುಂಡಿ ತೋಡಿ ಬಾಲಕಿಯನ್ನು ರಕ್ಷಿಸಲಾಯಿತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement