ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್‌ ಭಾರತದ ತಂಡದ ಉಪನಾಯಕ

ಮುಂಬೈ : ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಟೆಸ್ಟ್‌ ತಂಡದ ಉಪನಾಯಕನಾಗಿರುವ ರೋಹಿತ್‌ ಶರ್ಮಾ ಗಾಯಗೊಂಡು ಟೆಸ್ಟ್‌ ಸರಣಿಯಿಂದ ಹೊರಬಿದ್ದ ಕಾರಣ ಕೆ.ಎಲ್.ರಾಹುಲ್‌ ಅವರನ್ನು ಮೂರು ಟೆಸ್ಟ್‌ ಪಂದ್ಯಗಳ ಸರಣಿಗೆ ಉಪನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿದೆ.
ರೋಹಿತ್‌ ಶರ್ಮಾ ಅವರನ್ನು ಏಕದಿನ ಹಾಗೂ ಟಿ20 ಸರಣಿಗೆ ನಾಯಕನ್ನಾಗಿ ನೇಮಿಸಲಾಗಿದ್ದು, ಟಿ20 ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್‌ ಅವರನ್ನು ಉಪನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಟೆಸ್ಟ್‌ ಉಪನಾಯಕನಾಗಿದ್ದ ಅಜಿಂಕ್ಯಾ ರಹಾನೆಯನ್ನು ಕೆಳಗಿಳಿಸಿ ರೋಹಿತ್‌ ಶರ್ಮಾ ಅವರನ್ನು ಉಪನಾಯಕನ್ನಾಗಿ ನೇಮಿಸಲಾಗಿತ್ತು. ಆದರೆ ರೋಹಿತ್‌ ಶರ್ಮಾ ಗಾಯಗೊಂಡು ಟೆಸ್ಟ್‌ ಸರಣಿಯಿಂದಲೇ ಹೊರಬಿದ್ದಿದ್ದು ಟೆಸ್ಟ್‌ ಸರಣಿಗೆ ಕೆ.ಎಲ್.ರಾಹುಲ್‌ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.
ಡಿಸೆಂಬರ್‌ 26ರಿಂದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ಮೊದಲ ಟೆಸ್ಟ್‌ ಪಂದ್ಯವನ್ನಾಡಲಿದೆ. ನ್ಯೂಜಿಲೆಂಡ್‌ ವಿರುದ್ದದ ಸರಣಿಯಿಂದ ದೂರ ಉಳಿದಿದ್ದ ಕೆ.ಎಲ್.ರಾಹುಲ್‌ ಇದೀಗ ಟೀಂ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಶುಭಮನ್‌ ಗಿಲ್‌, ರೋಹಿತ್‌ ಶರ್ಮಾ ಗಾಯಗೊಂಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟೆಸ್ಟ್‌ ಸರಣಿಯಲ್ಲಿ ಕನ್ನಡಿಗ ಮಯಾಂಕ ಅಗರ್‌ವಾಲ್‌ ಹಾಗೂ ಕೆ.ಎಲ್.‌ ರಾಹುಲ್‌ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯಲಿದ್ದಾರೆ. ಗಾಯಗೊಂಡಿರುವ ರೋಹಿತ್‌ ಶರ್ಮಾ ಬದಲು ಪ್ರಿಯಾಂಕ್‌ ಪಂಚಾಲ್‌ ಅವರನ್ನು ಬದಲಿ ಆಟಗಾರರನ್ನಾಗಿ ನೇಮಕ ಮಾಡಲಾಗಿದೆ.
ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾವ್ (ವಿಕೆಟ್ ಕೀಪರ್), ), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್‌ ಸಿರಾಜ್

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement