ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳಕ್ಕೆ ಎಸ್‌ಪಿ ಸಂಸದ ಹಸನ್ ವಿರೋಧ:‌ ಪಕ್ಷಕ್ಕೂ ಹಸನ್ ಹೇಳಿಕೆಗೂ ಸಂಬಂಧವಿಲ್ಲ‌ ಎಂದ ಅಖಿಲೇಶ್‌ ಯಾದವ್‌

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಎಸ್‌.ಟಿ. ಹಸನ್ ಭಾರತದಲ್ಲಿ ಕನಿಷ್ಠ ವಿವಾಹ ವಯೋಮಿತಿ ಹೆಚ್ಚಳದ ಕುರಿತುಹೆಣ್ಣು ಮಗುವಿಗೆ ಫಲವತ್ತತೆಯ ವಯಸ್ಸನ್ನು (age of fertility)ತಲುಪಿದಾಗ ಮದುವೆ ಮಾಡಬೇಕು ಎಂದು ಆಘಾತಕಾರಿ ಹೇಳಿಕೆ ನೀಡಿದ ನಂತರ, ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಅವರ ಹೇಳಿಕೆಯಿಂದ ದೂರ ಸರಿದಿದ್ದಾರೆ. ಅವರ ಪಕ್ಷವು ಯಾವಾಗಲೂ ಮಹಿಳೆಯರು ಮತ್ತು ಹುಡುಗಿಯರ ಪ್ರಗತಿಯನ್ನು ನಂಬುತ್ತದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, “ಸಮಾಜವಾದಿ ಪಕ್ಷಕ್ಕೂ ಅಂತಹ ಹೇಳಿಕೆಗೂ ಯಾವುದೇ ಸಂಬಂಧವಿಲ್ಲ, ಸಮಾಜವಾದಿ ಪಕ್ಷವು ಯಾವಾಗಲೂ ಸಮಾಜದಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳೆಯರ ಪ್ರಗತಿಗಾಗಿ ನೀತಿಗಳನ್ನು ಮಾಡಿದೆ” ಎಂದು ಹೇಳಿದ್ದಾರೆ.
ಸಂಸದ ಎಸ್‌.ಟಿ. ಹಸನ್ ಅವರ ಆಘಾತಕಾರಿ ಹೇಳಿಕೆಗೆ ಪ್ರತಿಕ್ರಿಯೆ ಅಖಿಲೇಶ್ ಯಾದವ್ ಅವರ ಉತ್ತರ ಬಂದಿದೆ, “ಹೆಣ್ಣುಮಕ್ಕಳು ಫಲವತ್ತತೆಯ ವಯಸ್ಸಿಗೆ ಬಂದಾಗ ಮದುವೆಯಾಗಬೇಕು, ಪ್ರಬುದ್ಧ ಹುಡುಗಿಯನ್ನು 16 ವರ್ಷಕ್ಕೆ ಮದುವೆಯಾದರೆ ತಪ್ಪೇನಿಲ್ಲ. ಅವಳು 18ನೇ ವಯಸ್ಸಿಗೆ ಮತ ಹಾಕಬಹುದು. ಆದರೆ ಯಾಕೆ ಮದುವೆಯಾಗಬಾರದು? ಮದುವೆಯ ವಯಸ್ಸು ವಿಳಂಬವಾಗಬಾರದು ಎಂದು ಹೇಳಿಕೆ ನೀಡಿದ್ದರು.
ಸಮಾಜವಾದಿ ಪಕ್ಷದ ಮತ್ತೊಬ್ಬ ಸಂಸದ ಶಫೀಕರ್ ರಹಮಾನ್ ಬಾರ್ಕ್ ಕೂಡ ಮಸೂದೆಯನ್ನು ಬೆಂಬಲಿಸಲು ನಿರಾಕರಿಸಿದ್ದಾರೆ. “ಭಾರತ ಬಡ ದೇಶ ಮತ್ತು ಪ್ರತಿಯೊಬ್ಬರೂ ತಮ್ಮ ಮಗಳನ್ನು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಲು ಬಯಸುತ್ತಾರೆ … ನಾನು ಈ ಮಸೂದೆಯನ್ನು ಸಂಸತ್ತಿನಲ್ಲಿ ಬೆಂಬಲಿಸುವುದಿಲ್ಲ” ಎಂದು ಹೇಳಿದ್ದಾರೆ.
ಹೆಣ್ಣು ಮಗು ಜನಿಸಿದ ನಂತರ ಬಡ ಕುಟುಂಬಗಳಿಗೆ ಹೊರೆಯಾಗುತ್ತವೆ ಮತ್ತು ಅವರು ಅವಳ ಮದುವೆಗೆ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ ಎಂದು ಶಫೀಕರ್ ರೆಹಮಾನ್ ಹೇಳಿದ್ದಾರೆ ಎಂದು ರಿಪಬ್ಲಿಕ್‌ ಟಿವಿ ವರದಿ ಮಾಡಿದೆ. “ಹೆಣ್ಣು ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಯಾವುದೇ ರೀತಿಯ ಸಾಮಾಜಿಕ ಸಮಸ್ಯೆಗಳು ಮತ್ತು ಜವಾಬ್ದಾರಿಗಳನ್ನು ತೊಡೆದುಹಾಕಲು ಅದು ಸಹಾಯ ಮಾಡುತ್ತದೆ” ಎಂದು ಅವರು ಹೇಳಿದ್ದಾರೆ ಎಂದು ವರದಿ ಹೇಳಿದೆ.
ಬುಧವಾರ, ಕೇಂದ್ರ ಸಚಿವ ಸಂಪುಟವು ಮಹಿಳೆಯರ ಕಾನೂನುಬದ್ಧ ವಿವಾಹ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಹೆಚ್ಚಿಸುವ ಪ್ರಸ್ತಾವನೆಯನ್ನು ಅಂಗೀಕರಿಸಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿದ ಕಾರ್ಯಪಡೆಯ ಶಿಫಾರಸುಗಳ ಆಧಾರದ ಮೇಲೆ ಈ ಪ್ರಸ್ತಾಪವನ್ನು ಮಾಡಲಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement