ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ ನಲ್ಲಿ ಭಾರತ ಮೂಲದ 66 ಭಯೋತ್ಪಾದಕರು:ಅಮೆರಿಕ ವರದಿ

ವಾಷಿಂಗ್ಟನ್: ಜಾಗತಿಕ ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ(ಐಸಿಸ್) ಭಾರತ ಮೂಲದ 66 ಉಗ್ರರು ಇದ್ದಾರೆ ಎಂಬ ಆತಂಕಕಾರಿ ಮಾಹಿತಿಯನ್ನು ಅಮೆರಿಕ ವಿದೇಶಾಂಗ ಸಚಿವಾಲಯದ ವರದಿ ಹೇಳಿದೆ.
ಅಮೆರಿಕ ವಿದೇಶಾಂಗ ಸಚಿವಾಲಯದ ೨೦೨೦ ನೇ ಸಾಲಿನ ” ದೇಶಗಳಲ್ಲಿ ಭಯೋತ್ಪಾದಕತೆ ” ಎಂಬ ವರದಿಯಲ್ಲಿ ತಿಳಿಸಿದ್ದು ಇದರ ಜೊತೆಗೆ ಎನ್‌ಐಎ ಸೇರಿದಂತೆ ಭಾರತದ ಭಯೋತ್ಪಾದನಾ ನಿಗ್ರಹ ಪಡೆಗಳು ದೇಶೀಯ ಮತ್ತು ಪ್ರಾದೇಶಿಕ ಭಯೋತ್ಪಾದಕ ಶಕ್ತಿಗಳನ್ನು ಸಕ್ರಿಯವಾಗಿ ಪತ್ತೆಹಚ್ಚಿ ಮಟ್ಟಹಾಕಲು ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಶ್ಲಾಘಿಸಿದೆ.
ಈ ಪೈಕಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಈಗಾಗಲೇ ೩೪ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದ್ದು, ಕೇರಳ ಮತ್ತು ಪಶ್ಚಿಮ ಬಂಗಾಳದಿಂದ 160 ಮಂದಿಯನ್ನು ಬಂಧಿಸಿದೆ. ಇದರಲ್ಲಿ10 ಮಂದಿ ಆಲ್ ಕಾಯ್ದಾ ಸೇರಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಈ ಹಿಂದೆ ಕೇರಳ ಹಾಗೂ ದೇಶದ ಹಲವು ಭಾಗಗಳಿಂದ ಐಸಿಸ್‌ಗೆ ಯುವಕರು ಸೇರ್ಪಡೆಯಾಗಿರುವ ಬಗ್ಗೆ ಸಿರಿಯಾ, ಇರಾಕ್‌ ಸೇರಿದಂತೆ ಹಲವು ದೇಶಗಳಿಗೆ ಭಾರತದಿಂದ ತೆರಳಿದ್ದರು ಎಂಬ ವರದಿಯೂ ಅಮೆರಿಕಾದ ವರದಿಯನ್ನು ದೃಢೀಕರಿಸುತ್ತದೆ.
ಭಯೋತ್ಪಾದನೆ ನಿಗ್ರಹಕ್ಕೆ ಉಭಯ ದೇಶಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಉಗ್ರ ನಿಗ್ರಹ ಕುರಿತ ‘ನಿರ್ಣಯ-2309’ರ ಅನುಷ್ಠಾನಕ್ಕೆ ಶ್ರಮಿಸುತ್ತಿವೆ. ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಇದೇ ರೀತಿ ಮುಂದುವರೆಯುತ್ತದೆ’ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಪಾಕಿಸ್ತಾನ ಕ್ರಮ ಕೈಗೊಳ್ಳಲು ವಿಫಲ..:
ಭಯೋತ್ಪಾದನೆ ನಿಗ್ರಹ ಮಾಡುವ ವಿಚಾರದಲ್ಲಿ ಪಾಕಿಸ್ತಾನ ತಾನೇ ಹೇಳಿದ ಮಾತುಗಳಿಗೆ ಬದ್ಧವಾಗಿಲ್ಲ. ಜೈಶ್ ಸೇರಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಸಂಘಟನೆಗಳು ಭಾರತದ ವಿರುದ್ಧ ಇನ್ನೂಕಾರ್ಯಾಚರಣೆ ನಡೆಸುತ್ತಿದೆ. ಅವುಗಳನ್ನು ಮಟ್ಟ ಹಾಕುವಲ್ಲಿ ಪಾಕ್ ಸರ್ಕಾರ ಕೈಗೊಂಡ ಕ್ರಮಗಳು ಸಾಲದು ಎಂದೂ ಅಮೆರಿಕಾದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement