14.65 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ; ಕೀನ್ಯಾದಿಂದ ಮಹಿಳೆ ವಶಕ್ಕೆ

ಜೈಪುರ: ಬರೋಬ್ಬರಿ 2.150 ಕೇಜಿ ಮಾದಕ ದ್ರವ್ಯ ಹೊಂದಿದ್ದ ಕೀನ್ಯಾ ಪ್ರಜೆಯೊಬ್ಬಳನ್ನು ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಹೆರಾಯಿನ್ ಸುಮಾರು 14.65 ಕೋಟಿ ಬೆಲೆಬಾಳುತ್ತದೆ ಎಂದು ಹೇಳಲಾಗಿದೆ.
ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟಣೆಯಂತೆ 33 ವರ್ಷದ ಮಹಿಳೆ ಶಾರ್ಜಾದಿಂದ ಏರ್ ಅರೇಬಿಯಾ ವಿಮಾನದಲ್ಲಿ ಬಂದು ಇಳಿದಿದ್ದಾರೆ. ಆ ವೇಳೆ ಅವರನ್ನು ವಿಚಾರಿಸಲಾಗಿದೆ. ಆಕೆಯ ಮೊಬೈಲ್ ಸಂಖ್ಯೆ ಹಾಗೂ ಕಳೆದ ನವೆಂಬರ್ 13 ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ 90 ಕೋಟಿ ಬೆಲೆ ಬಾಳುವ 12.9 ಕಿಲೋ ಗ್ರಾಂ ಮಾದಕ ದ್ರವ್ಯ ಜಪ್ತಿ ಆದಾಗ ಸಿಕ್ಕಿದ ಉಗಾಂಡ ಮಹಿಳೆಯರ ಮೊಬೈಲ್ ಸಂಖ್ಯೆ ಒಂದೇ ಆಗಿರುವುದು ತಿಳಿದುಬಂದಿದೆ.
ಹೀಗಾಗಿ ಸಂಶಯಾಸ್ಪದವಾಗಿ ಕಂಡ ಅವರ ಲಗೇಜ್​ಗಳನ್ನು ಸೂಕ್ಷ್ಮವಾಗಿ ತನಿಖೆ ಮಾಡಲಾಗಿದೆ. ಮಾದಕ ದ್ರವ್ಯ, ನಾರ್ಕೊಟಿಕ್ಸ್​ಗಳ ಸ್ಮಗ್ಲಿಂಗ್ ಜಾಲದ ಶಂಕೆ ವ್ಯಕ್ತವಾದ ನಂತರ ದೈಹಿಕವಾಗಿ ಮತ್ತು ಎಕ್ಸ್ ರೇ ಮೂಲಕ ತನಿಖೆ ನಡೆಸಲಾಗಿದೆ.
ಮಹಿಳೆಯನ್ನು ಹಾಗೂ ಲಗೇಜ್​ಗಳನ್ನು ತನಿಖೆಗೆ ಒಳಪಡಿಸಲಾಗಿದೆ. ಆಗ ಸೂಟ್​ಕೇಸ್ ಅಸಹಜ ತೂಕ ಹೊಂದಿರುವುದು ಕಂಡುಬಂದಿದೆ. ಅದನ್ನು ಕತ್ತರಿಸಿ ನೋಡಿದಾಗ ಎರಡೂ ಕಡೆಗಳಲ್ಲಿ ಎನ್ವೆಲಪ್​ನಲ್ಲಿ ಬಿಳಿ ಬಣ್ಣದ ವಸ್ತು ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅದು ಹೆರಾಯಿನ್ ಎಂಬುದು ಗೊತ್ತಾಗಿದೆ. ಹೆಚ್ಚಿನ ಪರೀಕ್ಷೆ ಹಾಗೂ ತನಿಖೆಗೆ ವಸ್ತುವನ್ನು ಕೆಮಿಕಲ್ ಲ್ಯಾಬೊರೇಟರಿಗೆ ಕಳುಹಿಸಿಕೊಡಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement