‌ಪಾಕಿಸ್ತಾನಕ್ಕೆ ಸೇರಿದ ದೋಣಿಯಲ್ಲಿದ್ದ 400 ಕೋಟಿ ರೂ.ಗಳ ಮೌಲ್ಯದ ಹೆರಾಯಿನ್ ವಶಕ್ಕೆ

‌ಅಹಮದಾಬಾದ್:ದೇಶದೊಳಗೆ ಸುಮಾರು 400 ಕೋಟಿ ರೂಪಾಯಿ ಮೌಲ್ಯದ 77 ಕೆಜಿ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ ಪಾಕ್ ಮೂಲದ ದೋಣಿ ಹಾಗು ಅದರಲ್ಲಿದ್ದ 6 ಮಂದಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸï) ಜಂಟಿ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಗುಜರಾತ್ ಸಮುದ್ರಲ್ಲಿ ಕೋಸ್ಟ್ ಗಾರ್ಡ್ ರಾಜ್ಯ ಎಟಿಎಸ್ ಜೊತೆಗಿನ ಜಂಟಿ ಕಾರ್ಯಾಚರಣೆಯಲ್ಲಿ 77 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ದೋಣಿಯನ್ನು ಗುಜರಾತ್ ಕಚ್ ಜಿಲ್ಲಾಯ ಜಖೌ ಕರಾವಳಿಗೆ ತರಲಾಗಿದೆ.
ಕಳೆದ ತಿಂಗಳು ರಾಜ್ಯದ ಮೊರ್ಬಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯಿಂದ ಸುಮಾರು 600 ಕೋಟಿ ರೂ,ಗಳ ಮೌಲ್ಯದ ಹೆರಾಯಿನ್ ಅನ್ನು ಎಟಿಎಸ್ ವಶಪಡಿಸಿಕೊಂಡಿತ್ತು.
ಪಾಕಿಸ್ತಾನಿ ಡ್ರಗ್ ಡೀಲರುಗಳು ಅರಬ್ಬೀ ಸಮುದ್ರದ ಮೂಲಕ ತಮ್ಮ ಭಾರತೀಯ ಸಹವರ್ತಿಗಳಿಗೆ ಡ್ರಗ್ಸ್‌ ರವಾನೆ ಮಾಡಿದ್ದಾರೆ ಎಂದು ಎಟಿಎಸ್ ಹೇಳಿದೆ.
ಈ ವರ್ಷದ ಸೆಪ್ಟೆಂಬರಿನಲ್ಲಿ, ಭಾರತದಲ್ಲಿನ ಅತಿದೊಡ್ಡ ಹೆರಾಯಿನ್ ಸಾಗಣೆಯಲ್ಲಿ, ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ (ಡಿಆರ್‍ಐ) ಸುಮಾರು 3,000 ಕೆಜಿ ಡ್ರಗ್ಸ್‌ ವಶಪಡಿಸಿಕೊಂಡಿತ್ತು ಇದು ಅಫ್ಘಾನಿಸ್ತಾನದಿಂದ ಬಂದಿತ್ತು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ 21,000 ಕೋಟಿ ರೂಪಾಯಿ ಮೌಲ್ಯದ ಎಂದು ಮುಂದ್ರಾ ಬಂದರಿನಲ್ಲಿ ಅಧಿಕಾರಿಗಳು ಹೇಳಿದ್ದರು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement