ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ನೂತನ ಅಧ್ಯಕ್ಷರಾಗಿ ಅಶೋಕ್ ಹಾರನಹಳ್ಳಿ ಆಯ್ಕೆಯಾಗಿದ್ದಾರೆ.
ಅಶೋಕ ಹಾರನಹಳ್ಳಿ ಅವರು 455 ಮತಗಳ ಅಂತರದಿಂದ ಜಯಶಾಲಿಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕ್ ಹಾರನಹಳ್ಳಿ, ಎಸ್. ರಘುನಾಥ್ ಮತ್ತು ಆರ್. ಲಕ್ಷ್ಮೀಕಾಂತ್ ಸ್ಪರ್ಧಿಸಿದ್ದರು.
ಅಶೋಕ್ ಹಾರನಹಳ್ಳಿ 4,424 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿಗಳಾದ ಎಸ್. ರಘುನಾಥ್ 3,969 ಮತಗಳು ಮತ್ತು ಆರ್.ಲಕ್ಷ್ಮೀಕಾಂತ್ 2,239 ಮತಗಳನ್ನು ಪಡೆದರು.
ನೂತನ ಅಧ್ಯಕ್ಷರ ಅಧಿಕಾರ ಅವಧಿ 2022ರ ಜನವರಿಯಿಂದ 2024ರ ಡಿಸೆಂಬರ್ವರೆಗೆ ಇರಲಿದೆ. ರಾಜ್ಯದಲ್ಲಿ ಒಟ್ಟು 41 ಸಾವಿರ ಮಂದಿ ಮತದಾರರಿದ್ದಾರೆ. ಇದರಲ್ಲಿ 27 ಸಾವಿರ ಮತದಾರರು ಬೆಂಗಳೂರಿನಲ್ಲೇ ಇದ್ದಾರೆ. ಆದರೆ, ಇವರಲ್ಲಿ 7,054 ಮಂದಿ ಮಾತ್ರ ಮತ ಚಲಾಯಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ