ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(KSP) ಕೆಎಸ್‌ಆರ್‌ಪಿ ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ (IRB)ನ ವಿಶೇಷ ಮೀಸಲು ಉಪ-ನಿರೀಕ್ಷಕರ ಹುದ್ದೆಗೆ ಪುರುಷ, ಮಹಿಳೆ ಮತ್ತು ಮಂಗಳಮುಖಿಯರಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.
ಇದರಿಂದ ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ (Transgender) ಕೆಲಸ ಮಾಡಬಹುದಾಗಿದೆ. ಪೊಲೀಸ್ ಇಲಾಖೆಯ ಎಲ್ಲಾ ವಿಭಾಗದಲ್ಲಿಯೂ ಕೆಲಸ ಮಾಡಲು ಮಂಗಳಮುಖಿಯರಿಗೆ ಶೇ.1ರಷ್ಟು ಮೀಸಲಾತಿ ನೀಡಲಾಗಿದೆ.
. ಸೋಮವಾರ ಹೊರಡಿಸಿದ ಅಧಿಸೂಚನೆಯಂತೆ ಕರ್ನಾಟಕದಲ್ಲಿ ಮುಂಗಳಮುಖಿ ಸಮುದಾಯದಿಂದಲೂ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆ ಮೂಲಕ ಈ ವ್ಯವಸ್ಥೆ ಕಲ್ಪಿಸಿದ ಮೊದಲ ಸರ್ಕಾರಿ ಇಲಾಖೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಧಿಸೂಚನೆಯ ಪ್ರಕಾರ ಸದ್ಯ 70 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಜನವರಿ 18 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಈ ವರ್ಷದ ಜುಲೈನಲ್ಲಿ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದ್ದು, ಅದರಂತೆ ಮಂಗಳಮುಖಿಯರಿಗೆ ಸಾರ್ವಜನಿಕ ಉದ್ಯೋಗಗಳನ್ನು ಕಾಯ್ದಿರಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ವಿಶೇಷ ಮೀಸಲು ಉಪ ನಿರೀಕ್ಷಕರ 2,467 ಹುದ್ದೆಗಳು ಖಾಲಿಯಾದ ನಂತರ, ನಗರ ಮೂಲದ ಎನ್‌ಜಿಒ ಮತ್ತು ಇನ್ನಿತರ ಮಾನವ ಹಕ್ಕು ಸಂಘಟನೆಗಳು ಹಾಗೂ ಹಿರಿಯ ವಕೀಲರಾದ ಬಿಟಿ ವೆಂಕಟೇಶ್ ಜತೆಗೂಡಿ, ಸಾಮಾಜಿಕ ಕಾರ್ಯಕರ್ತೆ ನಿಶಾ ಗೂಳೂರ್ ಅವರು ಕಳೆದ ವರ್ಷ ಅಂದರೆ 2020 ರಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಸಲ್ಲಿಸಿದ್ದರು. ಈ ಮನವಿಗೆ ಒಗೊಟ್ಟ ಹೈಕೋರ್ಟ್ ಮಂಗಳಮುಖಿಯರ ಸಾರ್ವಜನಿಕ ಉದ್ಯೋಗಕ್ಕೆ ಅವಕಾಶ ಕಲ್ಪಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ