ದಿ. ಆರ್.ಎಸ್ ಹುಕ್ಕೇರಿಕರ ವಿಶೇಷ ಅಂಚೆ ಲಕೋಟೆ ಬಿಡುಗಡೆ

ಧಾರವಾಡ: ಕಾಲಕಾಲಕ್ಕೆ ಹಲವಾರು ಪ್ರಾತಸ್ಮರಣಿಯರು ಜನ್ಮತಾಳುತ್ತಾರೆ. ಅವರ ಆಗಮನದಿಂದ ದೇಶ ರಾಜ್ಯ ಸುಭಿಕ್ಷೆ ಕಾಣುತ್ತದೆ. ಸ್ವಾತಂತ್ರ‍್ಯ ಪೂರ್ವದಲ್ಲಿ ಜನಿಸಿದ ರಾಮರಾವ್ ಹುಕ್ಕೇರಿಕರವರು ಅಂತಹ ಮಹನೀಯರಲ್ಲಿ ಒಬ್ಬರು. ಅವರು ಅಂದು ಸ್ಥಾಪಿಸಿದ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆ ಇಂದು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಆಶೀರ್ವಾದದಿಂದ ಪ್ರತಿವರ್ಷ ಸಾವಿರಾರು ಮಕ್ಕಳ ವಿದ್ಯಾರ್ಜನೆಗೆ ದಾರಿಯಾಗಿದೆ ಎಂದು ಜೆ.ಎಸ್.ಎಸ್ ಸಂಸ್ಥೆ ಕಾರ್ಯದರ್ಶಿಗಳಾದ ಡಾ. ವಜ್ರಕುಮಾರ ಹೇಳಿದರು.
ಅವರು ಆಜಾದಿ-ಕಾ-ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ದಿ. ಆರ್ ಎಸ್ ಹುಕ್ಕೇರಿಕರ ಅವರ ಗೌರವಾರ್ಥವಾಗಿ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಜೆ.ಎಸ್.ಎಸ್ ಸಂಸ್ಥೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ೧೯೪೪ ರಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ರಾಮರಾವ್ ಹುಕ್ಕೇರಿಕರ ಅವರಿಗೆ ಸಲ್ಲುತ್ತದೆ. ಸ್ವಾತಂತ್ರ‍್ಯ ಸೇನಾನಿ, ಶಿಕ್ಷಣ ರಂಗದ ಪಿತಾಮಹ ಹುಕ್ಕೇರಿಕರ ಅವರ ಸಾಧನೆಗಳು ಯುವಸಮೂಹಕ್ಕೆ ದಾರಿದೀಪವಾಗಲಿ ಎನ್ನುವ ನಿಟ್ಟಿನಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಿಂದ ಅವರ ಜೀವನ ಕಾರ್ಯ ಹಾಗೂ ಸಾಧನೆಗಳ ಬಗ್ಗೆ ಒಂದು ಪುಸ್ತಕ ಹೊರ ತರಲಾಗುವುದು ಎಂದು ಹೇಳಿದರು
ಹಣಕ್ಕಾಗಿ ಕೆಲಸ ಮಾಡಿದ್ದರೆ ಕುಬೇರನಾಗಿ ಬಾಳಬಹುದಾಗಿದ್ದ ಹುಕ್ಕೇರಿಕರ ಅವರು ಬಡತನದಲ್ಲಿ ಇತರರಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಸ್ವಾತಂತ್ರ‍್ಯ ಹೋರಾಟಗಾರ, ರಾಜಕೀಯ ಮುತ್ಸದ್ದಿ, ಪತ್ರಿಕಾರಂಗದ ಮೊನಚು ಬರಹಗಾರ, ಶಿಕ್ಷಣ ಕ್ಷೇತ್ರದ ಭೀಷ್ಮನಾಗಿ ಎಲ್ಲ ರಂಗಗಳಲ್ಲೂ ತಮ್ಮ ಪ್ರಾಮಾಣಿಕ ಸೇವೆ ಸಲ್ಲಿಸಿ ಇಂದಿಗೆ ಧಾರವಾಡ ಶೈಕ್ಷಣಿಕ ಕಾಶಿಯಾಗಲು ಅಂದೇ ಅಡಿಗಲ್ಲನ್ನು ಇಟ್ಟರು. ಖಾದಿ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಶ್ರೀಯುತರು ಸ್ವಾತಂತ್ರ‍್ಯ ಹೋರಾಟದಲ್ಲಿ ಜೈಲು ವಾಸ ಅನುಭವಿಸಿದವರು. ಇಂಥವರು ಸ್ಥಾಪಿಸಿದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನಾವೆಲ್ಲ ಧನ್ಯರು ಎಂದು ಜೆ.ಎಸ್.ಎಸ್ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು
ತಮ್ಮ ತಂದೆ ಸ್ಥಾಪಿಸಿದ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆರುವುದನ್ನು ನೋಡುವುದೇ ಭಾಗ್ಯ ಎಂದು ಹೇಮಾ ಹೊಂಬಳ ಹಾಗೂ ವಿವೇಕ ಹುಕ್ಕೇರಿಕರ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಆಜಾದಿ ಅಮೃತ ಮಹೋತ್ಸವದ ಅಂಗವಾಗಿ ಭಾರತೀಯ ಅಂಚೆ ಇಲಾಖೆ ದೇಶದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸಿದವರ ಗೌರವಾರ್ಥವಾಗಿ ಅಂಚೆ ಲಕೋಟೆ ಬಿಡುಗಡೆ ಮಾಡುತ್ತಿದ್ದು, ದೇಶದ ಹೆಮ್ಮೆಯ ಪುತ್ರರಾದ ರಾಮರಾವ್ ಹುಕ್ಕೇರಿಕರವರ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಲು ನಮಗೆ ಹೆಮ್ಮೆ ಎನಿಸುತ್ತಿದೆ ಎಂದು ಅಂಚೆ ಇಲಾಖೆಯ ಹಿರಿಯ ಅಧೀಕ್ಷಕರಾದ ವಿ.ಎಸ್.ಎಲ್ ರಾವ್ ಹೇಳಿದರು.
ಚದೀಪಾ ಕುಲಕರ್ಣಿ ಪ್ರಾರ್ಥಿಸಿದರು. ಚಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಚಚಂದ್ರಶೇಖರ್ ಭಟ್ ವಂದಿಸಿದರು. ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement