ಕಿಕ್ ಸ್ಟಾರ್ಟ್‌ ಜೀಪ್‌ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರಾ: ವ್ಯಕ್ತಿಯ ಸೃಜನಶೀಲತೆಗೆ ಬೊಲೆರೊ ನೀಡುವುದಾಗಿ ಟ್ವೀಟ್​ !

ಹೈದರಾಬಾದ್: ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್​​ನಲ್ಲಿ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ತಯಾರಿಸಿದ ಕಿಕ್ – ಸ್ಟಾರ್ಟಿಂಗ್ ಜೀಪ್‌ನ ವಿಡಿಯೋ ಶೇರ್‌ ಮಾಡಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಜೀಪ್‌ಗೆ ಒದ್ದು ಕಿಕ್ ಸ್ಟಾರ್ಟ್ ಮಾಡುತ್ತಿದ್ದಾರೆ. ವಿಡಿಯೋ ನೋಡಿದ ನಂತರ ಆನಂದ್ ಮಹೀಂದ್ರಾ ಈ ವ್ಯಕ್ತಿಯ ಅಭಿಮಾನಿಯಾಗಿದ್ದೇನೆ ಎಂದು ಹೇಳಿದ್ದಾರೆ.

ಈ ವಿಶಿಷ್ಟ ಜೀಪ್​ ಅನ್ನು ಮಹಾರಾಷ್ಟ್ರ ಮೂಲದ ದತ್ತಾತ್ರೇಯ ಲೋಹರ್ ಎಂಬ ವ್ಯಕ್ತಿ ನಿರ್ಮಿಸಿದ್ದು, ಇದಕ್ಕೆ ಸುಮಾರು 60 ಸಾವಿರ ರೂ.ಗಳಷ್ಟು ವೆಚ್ಚವಾಗಿದೆ ಎನ್ನಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಳಸುವ ಕಿಕ್ ಸ್ಟಾರ್ಟ್​ ಮಾದರಿಯನ್ನು ಇದರಲ್ಲಿ ಬಳಸಲಾಗಿದೆ. ಈ ಕುರಿತು ತಮ್ಮ ಟ್ವಿಟರ್​​​ ಹ್ಯಾಂಡಲ್​ನಲ್ಲಿ ಬರೆದುಕೊಂಡಿರುವ ಅವರು, ‘ನಿಸ್ಸಂಶಯವಾಗಿ ಇದು ಯಾವುದೇ ನಿಯಮಗಳಿಗೆ ಹೊಂದಿಕೆಯಾಗುವುದಿಲ್ಲ. ಆದರೆ, ನಮ್ಮ ಜನರ ಜಾಣ್ಮೆ ಮತ್ತು ಕನಿಷ್ಠ ಸಂಪನ್ಮೂಲಗಳನ್ನು ನಾನು ಪ್ರಶಂಸಿಸುತ್ತೇನೆ ಎಂದು ಆನಂದ್ ಮಹೀಂದ್ರಾ ಬರೆದುಕೊಂಡಿದ್ದಾರೆ. ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿರುವ ಈ ವಿಡಿಯೋವನ್ನು ಸಾವಿರಾರು ಮಂದಿ ಲೈಕ್ ಮಾಡಿದ್ದಾರೆ.

ಹಳೆ ಕಾರಿಗೆ ಬೊಲೆರೊ ಎಕ್ಸ್​ಚೇಂಜ್​:
ಈ ವಿಡಿಯೋ ಹಂಚಿಕೊಂಡ ನಂತರ ಮತ್ತೊಂದು ಟ್ವೀಟ್‌ ಮಾಡಿರುವ ಅವರು, ವಾಹನವು ನಿಯಮಗಳನ್ನು ಅನುಸರಿಸದ ಕಾರಣ ಸ್ಥಳೀಯ ಅಧಿಕಾರಿಗಳು ಅದನ್ನು ರಸ್ತೆಗಳಲ್ಲಿ ಓಡಿಸುವುದನ್ನು ತಡೆಯುತ್ತಾರೆ ಎಂದು ಅವರು ಹೇಳಿದ್ದಾರೆ. ಅವರ ನವೀನ ರಚನೆಗಾಗಿ ದತ್ತಾತ್ರೇಯ ಲೋಹರ್ ಅವರನ್ನು ಪುರಸ್ಕರಿಸುತ್ತಾ, ಲೋಹರ್ ಅವರಿಗೆ ಹಳೆಯ ವಾಹನದ ಬದಲಾಗಿ ಬೊಲೆರೊವನ್ನು ನೀಡಲಾಗುತ್ತದೆ ಮತ್ತು ಅವರ ಈ ವಿಶಿಷ್ಟ ಕಾರನ್ನು ಇತರರಿಗೆ ಸ್ಫೂರ್ತಿಯಾಗಿ ಮಾಡುವ ಉದ್ದೇಶದಿಂದ ಮಹೀಂದ್ರಾ ರಿಸರ್ಚ್ ವ್ಯಾಲಿಯಲ್ಲಿ ಇದನ್ನು ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement