ಪೋಲ್ ಸ್ಟ್ರಾಟ್-ನ್ಯೂಸ್ ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆ: ಉತ್ತರಾಖಂಡ ಗೆಲ್ಲುವವರು ಯಾರು?

ಪೋಲ್ ಸ್ಟ್ರಾಟ್-ನ್ಯೂಸ್ ಎಕ್ಸ್ (Polstrat-NewsX ) ಚುನಾವಣಾ ಪೂರ್ವ ಸಮೀಕ್ಷೆಯು 2022 ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಭರ್ಜರಿ ಜಯ ಪಡೆಯುವ ಬಗ್ಗೆ ಭವಿಷ್ಯ ನುಡಿದಿದೆ.
70 ಸ್ಥಾನಗಳಲ್ಲಿ, ಬಿಜೆಪಿ 40-50% ಮತ ಹಂಚಿಕೆಯೊಂದಿಗೆ 36-41 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್‌ 34.20% ಮತ ಹಂಚಿಕೆಯೊಂದಿಗೆ 25-30 ಸ್ಥಾನಗಳನ್ನು ಗೆಲ್ಲುವ ಮೂಲಕ ರನ್ನರ್ ಅಪ್ ಆಗುವ ನಿರೀಕ್ಷೆಯಿದೆ ಮತ್ತು ಆಪ್‌ (AAP) 10.40% ಮತ ಹಂಚಿಕೆಯೊಂದಿಗೆ 2-4 ಸ್ಥಾನಗಳನ್ನು ಮಾತ್ರ ಪಡೆಯುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಕಂಡುಕೊಂಡಿದೆ.

ಮುಂದಿನ ಸಿಎಂ ಮುಖ

ಈ ಬಗ್ಗೆ ಪ್ರತಿಕ್ರಿಯಿಸಿದವರಲ್ಲಿ 41% ರಷ್ಟು ಜನರು ಪ್ರಸ್ತುತ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು 2022 ರಲ್ಲಿ ಹುದ್ದೆಯನ್ನು ಉಳಿಸಿಕೊಳ್ಳಬೇಕೆಂದು ಬಯಸುತ್ತಾರೆ, ನಂತರ ಹರೀಶ್ ರಾವತ್ (25%), ಕರ್ನಲ್ ಕೊಥಿಯಾಲ್ (14.70%), ತ್ರಿವೇಂದ್ರ ಸಿಂಗ್ ರಾವತ್ (5.70%) ಜನರು ಮುಂದಿನ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದಾರೆ . ಪುಷ್ಕರ್ ಸಿಂಗ್ ಧಾಮಿ ಪುರುಷರಲ್ಲಿ 42% ರಷ್ಟು ಜನರು ಹಾಗೂ ಮಹಿಳೆಯರಲ್ಲಿ 40% ರಷ್ಟು ಜನರು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಪ್ರಮುಖ ಸಮಸ್ಯೆಗಳು
ವಿವಿಧ ಸಮಸ್ಯೆಗಳ ಪೈಕಿ, 44.70% ಪ್ರತಿಸ್ಪಂದಕರು ಉದ್ಯೋಗಗಳು ಅತಿದೊಡ್ಡ ಮತದಾನದ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಸರ್ಕಾರಿ ಸ್ಥಿರತೆ (19.70%), ಇತರ ಸಮಸ್ಯೆಗಳು (13.40%), ಮೂಲಸೌಕರ್ಯ (11.40%), ಪ್ರವಾಹ ನಿರ್ವಹಣೆ (6.70%), ಮತ್ತು ದೇವಸ್ತಾನ ಮಂಡಳಿಗೆ ಹೋಲಿಸಿದರೆ, (4.10%).
ದೇವಸ್ತಾನಂ ಮಂಡಳಿಯನ್ನು ರದ್ದುಗೊಳಿಸಬೇಕೇ ಎಂದು ಕೇಳಿದಾಗ, ಪ್ರತಿಕ್ರಿಯಿಸಿದವರಲ್ಲಿ 35.70% ಹೌದು, 22.60% ಬೇಡ ಎಂದು ಹೇಳಿದ್ದಾರೆ

ಹೊಸ ಪಕ್ಷದ  ಪ್ರಭಾವ
ಪ್ರತಿಕ್ರಿಯಿಸಿದವರಲ್ಲಿ ಹೆಚ್ಚಿನವರು (53.50%) ಆಮ್ ಆದ್ಮಿ ಪಕ್ಷ (ಎಎಪಿ) ತಮ್ಮ ಪ್ರದೇಶದಲ್ಲಿ ಪ್ರಭಾವ ಬೀರಿದೆ ಎಂದು ಹೇಳಿದರೆ 6.90% ಪ್ರತಿಕ್ರಿಯಿಸಿದವರು ಬಹುಶಃ ಬೀರಿರಬಹುದು ಎಂದು ಹೇಳಿದ್ದಾರೆ. 35.40% ಜನರು ಪ್ರಭಾವ ಬೀರಿಲ್ಲ ಎಂದು ಹೇಳಿದ್ದಾರೆ, ಆದರೆ 4.20% ಅವರು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನೆಚ್ಚಿನ ರಾಷ್ಟ್ರೀಯ ನಾಯಕ
55.20%ರಷ್ಟು ಜನರಿಗೆ ಪ್ರಧಾನಿ ನರೇಂದ್ರ ಮೋದಿ ನೆಚ್ಚಿನ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮಿದ್ದಾರೆ. ಉಳಿದಂತೆ ಅರವಿಂದ್ ಕೇಜ್ರಿವಾಲ್ (18.20%), ರಾಹುಲ್ ಗಾಂಧಿ (15.20%), ಮಮತಾ ಬ್ಯಾನರ್ಜಿ (5.60%), , ಮತ್ತು ಇತರರನ್ನು (5.80%) ಆಯ್ಕೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement