ಭಾರತದಲ್ಲಿ 300ರ ಗಡಿದಾಟಿದ ಓಮಿಕ್ರಾನ್ ಪ್ರಕರಣಗಳು: ಪ್ರಧಾನಿ ಮೋದಿಯಿಂದ ಪರಿಸ್ಥಿತಿ ಅವಲೋಕನ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ಸಂಖ್ಯೆಯು 300ರ ಗಡಿ ದಾಟುತ್ತಿದ್ದಂತೆಯೇ ಕೋವಿಡ್‌ನ ಸಂಭವನೀಯ ಮೂರನೇ ಅಲೆಯ ದೃಷ್ಟಿಯಿಂದ ರ್ಯಾಲಿಗಳು, ರಾಜಕೀಯ ಸಭೆಗಳನ್ನು ನಿಷೇಧಿಸುವುದು ಮತ್ತು ಅಗತ್ಯವಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಸೂಚಿಸಿದೆ.
ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ದೇಶದ ಕೋವಿಡ್-19 ಪರಿಸ್ಥಿತಿಯ ಕುರಿತು ಪರಿಶೀಲನಾ ಸಭೆ ನಡೆಸಿದರು.ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೊನೆಯದಾಗಿ ಲಭ್ಯವಿರುವ ಅಪ್‌ಡೇಟ್ ಪ್ರಕಾರ, ಮಹಾರಾಷ್ಟ್ರವು ಇಲ್ಲಿಯವರೆಗೆ ಹೊಸ ಒಮಿಕ್ರಾನ್ ರೂಪಾಂತರದ 80 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. .64 ಪ್ರಕರಣಗಳೊಂದಿಗೆ ದೆಹಲಿ ಎರಡನೇ ಸ್ಥಾನದಲ್ಲಿದೆ. ತೆಲಂಗಾಣದಲ್ಲಿ 24, ರಾಜಸ್ಥಾನದಲ್ಲಿ 21 ಮತ್ತು ಕರ್ನಾಟಕದಲ್ಲಿ 31 ಹಾಗೂ ತಮಿಳುನಾಡಿನಲ್ಲಿ 34 ಪ್ರಕರಣಗಳು ವರದಿಯಾಗಿವೆ.
ವೈರಸ್ ಹರಡುವುದನ್ನು ನಿರ್ಬಂಧಿಸಲು ಕ್ರಿಸ್‌ಮಸ್ ಮತ್ತು ಹೊಸ ವರ್ಷದಂದು ಜನಸೇರುವಿಕೆಯನ್ನು ನಿಷೇಧಿಸಲು ಹಲವಾರು ರಾಜ್ಯಗಳು ಕ್ರಮಗಳನ್ನು ಕೈಗೊಂಡಿವೆ. ಕೋವಿಡ್ ಪರಿಸ್ಥಿತಿಯನ್ನು ಪ್ರಧಾನಿ ಮೋದಿ ಅವಲೋಕಿಸಿದ್ದಾರೆ
ದೇಶದ ಕೋವಿಡ್ -19 ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ಮೋದಿ ಗುರುವಾರ ಸಭೆ ನಡೆಸಿದರು.
ಅಧಿಕೃತ ಮೂಲಗಳ ಪ್ರಕಾರ, ಹಿರಿಯ ಅಧಿಕಾರಿಗಳು ಮತ್ತು ತಜ್ಞರು ಭಾಗವಹಿಸಿದ್ದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಮೋದಿ ಅವರು ದೇಶಾದ್ಯಂತ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಶೀಲಿಸಿದರು.

ಪ್ರಮುಖ ಸುದ್ದಿ :-   ರಾಜಕೀಯದಿಂದ ಮತ್ತೆ ನಟನೆಗೆ ; 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ 2ʼ ಮೂಲಕ ಮತ್ತೆ ಕಿರುತೆರೆಗೆ ಬಂದ ಸ್ಮೃತಿ ಇರಾನಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement