ಉತ್ತರ ಪ್ರದೇಶ ಪೊಲೀಸ್ ಪರೀಕ್ಷೆಯಲ್ಲಿ ನಕಲು ಹೊಡೆಯಲು ವಿಗ್‌ನಲ್ಲಿ ವೈರ್‌ಲೆಸ್ ಸಾಧನ ಅಳವಡಿಸಿ ಸಿಕ್ಕಿಬಿದ್ದ ವ್ಯಕ್ತಿಯ ವಿಡಿಯೊ ವೈರಲ್

ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಲು ಅಥವಾ ವಂಚನೆ ಮಾಡಲು ಈಗ ಸಾಂಪ್ರದಾಯಿಕ ತಂತ್ರಗಳನ್ನು ಬಳಸುವ ದಿನಗಳು ಕಳೆದುಹೋಗಿವೆ. ಉತ್ತರ ಪ್ರದೇಶದಲ್ಲಿ ಪೊಲೀಸ್ ಆಕಾಂಕ್ಷಿಯೊಬ್ಬ ಊಹಿಸಲೂ ಸಾಧ್ಯವಾಗದ ತಂತ್ರದೊಂದಿಗೆ ವಂಚನೆಯನ್ನು ಸಂಪೂರ್ಣವಾಗಿ ವಿಭಿನ್ನ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿಗೆ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೊ, ಪರೀಕ್ಷೆಯಲ್ಲಿ ವಂಚನೆ ಮಾಡಲು ಹೋಗಿ ಸಿಕ್ಕಿಬಿದ್ದ ವ್ಯಕ್ತಿಯನ್ನು ತೋರಿಸುತ್ತದೆ. ವಿಡಿಯೊ ಪ್ರಾರಂಭವಾಗುತ್ತಿದ್ದಂತೆ, ಸೂಕ್ಷ್ಮವಾದ ತಂತಿಗಳನ್ನು ಜೋಡಿಸಲಾದ ವ್ಯಕ್ತಿಯಿಂದ ಭದ್ರತೆ ಸಿಬ್ಬಂದಿ ಎರಡು ಇಯರ್‌ಪೀಸ್‌ಗಳನ್ನು ತೆಗೆದುಹಾಕುತ್ತಾರೆ. ನಂತರ ವ್ಯಕ್ತಿಯ ವಿಗ್‌ನಲ್ಲಿ ಎಚ್ಚರಿಕೆಯಿಂದ ಮರೆಮಾಚಲಾಗಿರುವ ಬ್ಲೂಟೂತ್ ಸಾಧನಕ್ಕೆ ತಂತಿಗಳನ್ನು ಜೋಡಿಸಿರುವುದನ್ನು ಭದ್ರತಾ ಸಿಬ್ಬಂದಿ ಪತ್ತೆ ಹಚ್ಚುವುದು ಕಂಡುಬರುತ್ತದೆ..!

ಮೆಟಲ್ ಡಿಟೆಕ್ಟರ್‌ಗಳ ಮೂಲಕ ತಪಾಸಣೆ ನಡೆಸಿದ ನಂತರ ವ್ಯಕ್ತಿಯನ್ನು ಹಿಡಿಯಲಾಯಿತು. ಇಂತಹ ಜುಗಾಡ್ ವಿಧಾನದಿಂದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಪ್ರಯತ್ನಿಸುವುದಕ್ಕೆ ಕೆಲವರು ಆಶ್ಚರ್ಯಚಕಿತರಾಗಿದ್ದಾರೆ.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement