ಪುಣೆಯಲ್ಲಿ ಗುಂಡುಹಾರಿಸಿ ಕುಸ್ತಿಪಟುವಿನ ಹತ್ಯೆ; ವಿಡಿಯೊದಲ್ಲಿ ಸೆರೆಯಾಯ್ತು ದೃಶ್ಯ

ಪುಣೆ: ಮಹಾರಾಷ್ಟ್ರದ ಪುಣೆ ಜಿಲ್ಲೆಯ ಚಕನ್ ಪ್ರದೇಶದಲ್ಲಿ ನಿನ್ನೆ ರಾತ್ರಿ 37 ವರ್ಷದ ಕುಸ್ತಿಪಟುವನ್ನು ನಾಲ್ವರು ಗುಂಡಿಕ್ಕಿ ಕೊಂದ ಆಘಾತಕಾರಿ ಘಟನೆ ನಡೆದಿದೆ. ಕುಸ್ತಿಪಟು ಗುರುವಾರ ರಾತ್ರಿ 10.30ರ ಸುಮಾರಿಗೆ ಕಾರಿನಲ್ಲಿ ಹೋಗುತ್ತಿರುವಾಗ ಅಡ್ಡ ಹಾಕಿ ಗುಂಡು ಹಾರಿಸಲಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಕೊಲೆಯಾದ ಕುಸ್ತಿಪಟುವನ್ನು ನಾಗೇಶ ಕರಾಳೆ ಎಂದು ಗುರುತಿಸಲಾಗಿದೆ.
ಭೀಕರ ಹತ್ಯೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಾಲ್ವರು ಶೂಟರ್‌ಗಳು ವಾಹನವನ್ನು ಸುತ್ತುವರೆದು ಕುಸ್ತಿಪಟುವಿನ ಮೇಲೆ ಹೇಗೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂಬುದನ್ನು ವಿಡಿಯೋದಲ್ಲಿ ಕಾಣಬಹುದು.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕರಾಳೆ ಅವರು ಖೇಡ್ ತಾಲೂಕಿನಲ್ಲಿ ಕುಸ್ತಿ ಅಕಾಡೆಮಿ ನಡೆಸುತ್ತಿದ್ದರು. ಈ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಕೊಲೆಗಾರರನ್ನು ಗುರುತಿಸಲಾಗಿದೆ. ಪೊಲೀಸರು ಕೆಲವು ಸುಳಿವುಗಳ ಜಾಡು ಹಿಡಿದು ಆರೋಪಿಗಳಿಗಾಗಿ ಹುಡುಕುತ್ತಿದ್ದಾರೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

https://twitter.com/RahulChouhan92/status/1474249795900350465?ref_src=twsrc%5Etfw%7Ctwcamp%5Etweetembed%7Ctwterm%5E1474249795900350465%7Ctwgr%5E%7Ctwcon%5Es1_&ref_url=https%3A%2F%2Ftv9kannada.com%2Fcrime%2Fwrestler-nagesh-karale-murdered-by-four-assailants-in-pune-chakan-cctv-video-viral-sct-312982.html

ನಿಮ್ಮ ಕಾಮೆಂಟ್ ಬರೆಯಿರಿ

advertisement