ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದ ಘಟನೆ ಕಳಸ ತಾಲೂಕಿನ ರುದ್ರಪಾದ ಬಳಿ ನಡೆದಿದೆ.
ವಿದ್ಯಾರ್ಥಿಗಳಾದ ಜೀವನ್ ದಾಸ್(17) ಮತ್ತು ನಿಕ್ಷೇಪ್(17) ಮೃತ ದುರ್ದೈವಿಗಳು.
ಜೀವನ್ ದಾಸ್ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬ ವಿದ್ಯಾರ್ಥಿ ನಿಕ್ಷೇಪ್ ಗಾಗಿ ಮುಂದುವರಿದ ಶೋಧ ನಡೆಸಿದ್ದಾರೆ.
ಗುರುವಾರ ಕಾಲೇಜಿಗೆ ಹೋದವರು ಮನೆಗೆ ಬಂದಿರಲಿಲ್ಲ. ಇಂದು ಹುಡುಕಾಟ ನಡೆಸಿದಾಗ ಭದ್ರಾ ನದಿಯ ದಡದಲ್ಲಿ ಅವರ ಮೊಬೈಲ್, ಡ್ರೆಸ್ ಪತ್ತೆಯಾಗಿದೆ. ನೀರುಪಾಲಾದ ವಿದ್ಯಾರ್ಥಿಗಳು ಹಿರೇಬೈಲ್ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿಗಳೆಂದು ತಿಳಿದು ಬಂದಿದ್ದು, ಕಳಸ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ