ವಿಜಯ ಸಂದೇಶ ವಾರ ಪತ್ರಿಕೆಯ ಗೌರವ ಸಂಪಾದಕ ಚಂದ್ರಕಾಂತ ಅಂಗಡಿ ನಿಧನ

ಹಳಿಯಾಳ: ಸರಳ ವ್ಯಕ್ತಿತ್ವ ಹಾಗೂ ಸರ್ವ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ತಾಲೂಕಾ ಬಸವ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ, ಅಂಗಡಿ ಸರ್ವಿಸ್ ಮಾಲೀಕ ಹಾಗೂ ವಿಜಯ ಸಂದೇಶ ವಾರ ಪತ್ರಿಕೆಯ ಗೌರವ ಸಂಪಾದಕ ಚಂದ್ರಕಾಂತ ಅಂಗಡಿ (62) ಶುಕ್ರವಾರ ನಸುಕಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು.
ಮೃತರು ಪತ್ನಿ , ಓರ್ವ ಪುತ್ರ, ಮೂವರು ಸಹೋದರರು ಹಾಗೂ ಓರ್ವ ಸಹೋದರಿ ಹಾಗೂ ಅಪಾರ ಬಂಧು ಬಳಗದವರನ್ನು ಬಿಟ್ಟು ಅಗಲಿದ್ದಾರೆ.

ಚಿತ್ರದುರ್ಗದ ಬೃಹಣ್ಮಠ ಸ್ವಾಮೀಜಿಗಳು, ಹಳಿಯಾಳ ಉಪ್ಪಿನಬೆಟಗೇರಿ ವಿರಕ್ತಮಠ ಸ್ವಾಮೀಜಿಗಳು, ಇಲಕಲ್ಲ ಮಹಾಂತ ಸ್ವಾಮಿಗಳು, ಚಿತ್ತರಗಿ ಮಹಾಸಂಸ್ಥಾನ ಮಠಾಧೀಶರು, ಮುಂಡಗೋಡ ಅತ್ತಿವೇರಿ ಧಾಮದ ಶರಣೆ ಬಸವೇಶ್ವರಿ, ಶಾಸಕ ಆರ್ ವಿ ದೇಶಪಾಂಡೆ, ಧಾರವಾಡ ಕ್ಷೇತ್ರದ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ್,ವಿಧಾನ ಪರಿಷತ ಸದಸ್ಯ ಎಸ್. ಎಲ್. ಘೋಟ್ನೆಕರ , ಮಾಜಿ ಶಾಸಕ ಸುನಿಲ ಹೆಗಡೆ,ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್ ವಾಸರೆ ,ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರೀಕಟ್ಟಿ ,ಹಾಗೂ ವಿವಿಧ ಸಮಾಜದ ಗಣ್ಯರು ರಾಜಕೀಯ ಮುಖಂಡರು ಅಂಗಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್‌ ಚುನಾವಣೆ: ಬಿಜೆಪಿ-ಜೆಡಿಎಸ್ ಶಾಸಕರ ‘ಅಡ್ಡ ಮತದಾನ ’ ಕಾಂಗ್ರೆಸ್ ಕೈ ಹಿಡಿದದ್ದು ಹೇಗೆ ?

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement