ಕರ್ನಾಟಕದಲ್ಲಿ ಜನವರಿ 3 ರಿಂದ 15ರಿಂದ18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: ಮೊದಲನೇ ಹಂತದಲ್ಲಿ 15ರಿಂದ18 ವರ್ಷದ ಮಕ್ಕಳಿಗೆ ಲಸಿಕೆ ನೀಡಿಕೆ ಪ್ರಕ್ರಿಯೆ ಆರಂಭಿಸಲಿದ್ದು, ಜನವರಿ 3 ರಿಂದ ಮೊದಲ ಹಂತದಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​ ತಿಳಿಸಿದ್ದಾರೆ.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ 15-18 ವರ್ಷದ 45 ಲಕ್ಷ ಜನ ಮಕ್ಕಳಿದ್ದಾರೆ. ಅವರಿಗೆಲ್ಲ ಲಸಿಕೆ ನೀಡಲಾಗುತ್ತದೆ. 3ನೇ ಡೋಸ್ (ಬೂಸ್ಟರ್‌ ಡೋಸ್‌) ಜನವರಿ 10ರಿಂದ 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೂ ನೀಡಲಾಗುತ್ತದೆ. ಪ್ರತಿ ಜಿಲ್ಲೆ, ಪ್ರತಿ ರಾಜ್ಯದಲ್ಲಿ ಕೋವಿಡ್ ವಾರಿಯರ್ಸ್‌ಗೆ 3ನೇ ಡೋಸ್ ನೀಡುತ್ತೇವೆ. ಕೇಂದ್ರದಿಂದ ಮಾರ್ಗಸೂಚಿ ಬರುತ್ತಿದ್ದಂತೆ ಅದರ ಪ್ರಕಾರ ಮಕ್ಕಳಿಗೆ ಲಸಿಕೆ ನೀಡುತ್ತೇವೆ ಎಂದು ಮಾಹಿತಿ ನೀಡಿದರು.
.ರಾಜ್ಯದಲ್ಲಿ ಮೊದಲ ಡೋಸ್ ಅನ್ನು ಶೇ.97ರಷ್ಟು ಜನರು ಪಡೆದಿದ್ದಾರೆ. ಬಾಕಿ ಉಳಿದ ಶೇ.3ರಷ್ಟು ಮೊದಲ ಡೋಸ್ ಅನ್ನು ಶೀಘ್ರವೇ ನೀಡಲಾಗುತ್ತದೆ. ರಾಜ್ಯದಲ್ಲಿ ಲಸಿಕೆ ಹಾಕಲು ಸಮರೋಪಾದಿಯಲ್ಲಿ ಕೆಲಸ ನಡೆಸುತ್ತಿದೆ. ದೇಶದಲ್ಲಿ ಓಮಿಕ್ರಾನ್ ಹೆಚ್ಚಳವಾಗುವ ಸಾಧ್ಯತೆ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮ ಅನಿವಾರ್ಯ ಎಂದು ತಿಳಿಸಿದರು.
ಸೋಂಕು ಹೆಚ್ಚಾಗುವ ಮುನ್ನವೇ ಕೋವಿಡ್‌ 2 ಡೋಸ್ ತೆಗೆದುಕೊಳ್ಳಬೇಕು ಇದರಿಂದ ಸಾವು-ನೋವು ಕಡಿಮೆ ಆಗಲಿದೆ. ಪರಿಸ್ಥಿತಿ ಎದುರಿಸಲು 4000 ಐಸಿಯು ಬೆಡ್ ಸಿದ್ಧಗೊಳಿಸಲಾಗಿದೆ.. 7051 ಐಸಿಯು ಬೆಡ್‌ಗಳನ್ನು ಸಿದ್ಧವಿರಿಸಲು ಸೂಚಿಸಲಾಗಿದೆ. ಓಮಿಕ್ರಾನ್ ಎದುರಿಸಲು ಉಪಕರಣಗಳನ್ನು ತೆಗೆದುಕೊಳ್ಳಲು ತಜ್ಞರ ಸಮಿತಿ ಹೇಳಿದೆ. ಅದರಂತೆ ಓಮಿಕ್ರಾನ್ ಶೀಘ್ರ ಪತ್ತೆಗೆ ಥರ್ಮೋಫಿಶೆರ್ ಖರೀದಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement