ಕರ್ನಾಟಕದಲ್ಲಿ ಇಂದು 566 ಹೊಸ ಕೋವಿಡ್ ಪ್ರಕರಣಗಳು ದಾಖಲು: ಬೆಂಗಳೂರಿನಲ್ಲೇ 400 ಹೊಸ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಬುಧವಾರ 566 ಹೊಸ ಕೋವಿಡ್-19 ಪ್ರಕರಣಗಳು ಮತ್ತು ಆರು ಸಾವುಗಳು ವರದಿಯಾಗಿವೆ, ಒಟ್ಟು ಸೋಂಕಿತರ ಸಂಖ್ಯೆ 30,05,798 ಕ್ಕೆ, ಸಾವಿನ ಸಂಖ್ಯೆ 38,324 ಕ್ಕೆ ತಲುಪಿದೆ. ಈಗ ಮತ್ತೆ ಪ್ರಕರಣಗಳು ಐದುನೂರರ ಗಡಿ ದಾಟಿದೆ.
ಈ ದಿನ 245 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದು, , ಇದುವರೆಗೆ ರಾಜ್ಯದಲ್ಲಿ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 29,59,674 ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆಯ ಬುಲೆಟಿನ್ ತಿಳಿಸಿದೆ.
ಇಂದು ಬೆಂಗಳೂರು ನಗರದಲ್ಲಿ 400 ಪ್ರಕರಣಗಳು ವರದಿಯಾಗಿದ್ದು, 130 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಮತ್ತು ನಾಲ್ಕು ಸಾವು ನಗರದಲ್ಲಿ ಸಂಭವಿಸಿವೆ. ಚಿತ್ರದುರ್ಗ ಮತ್ತು ತುಮಕೂರಿನ ತಲಾ ಒಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈಗ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7,771ಕ್ಕೆ ಏರಿಕೆಯಾಗಿದೆ. ದಿನದ ಪಾಸಿಟಿವಿಟಿ ದರ 0.52 ಪ್ರತಿಶತದಷ್ಟಿದ್ದರೆ, ಪ್ರಕರಣದಿಂದ ಸಾವಿನ ಪ್ರಮಾಣವು (CFR) 1.06 ಶೇಕಡಾದಷ್ಟಿದೆ.
ಹೊಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 6, ಬೆಂಗಳೂರು ಗ್ರಾಮಾಂತರ 3, ಬೆಂಗಳೂರು ನಗರ 400, ಬೀದರ್ 0, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 1, ಚಿತ್ರದುರ್ಗ 2, ದಕ್ಷಿಣ ಕನ್ನಡ 33, ದಾವಣಗೆರೆ 2, ಧಾರವಾಡ 7, ಗದಗ 0, ಹಾಸನ 31, ಹಾವೇರಿ 0, ಕಲಬುರಗಿ 3, ಕೊಡಗು 14, ಕೋಲಾರ 14, ಕೊಪ್ಪಳ 0, ಮಂಡ್ಯ 9, ಮೈಸೂರು 9, ರಾಯಚೂರು 0, ರಾಮನಗರ 0, ಶಿವಮೊಗ್ಗ 1, ತುಮಕೂರು 8, ಉಡುಪಿ 17, ಉತ್ತರ ಕನ್ನಡ 2, ವಿಜಯಪುರ 1 ಮತ್ತು ಯಾದಗಿರಿಯಲ್ಲಿ ಶೂನ್ಯ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement