ರಾಮದುರ್ಗ: ಪಟಾಕಿ ಸಿಡಿದು ರಥಕ್ಕೆ ತಗುಲಿದ ಬೆಂಕಿ, ತಪ್ಪಿದ ಅನಾಹುತ.. ದೃಶ್ಯ ವಿಡಿಯೊದಲ್ಲಿ ಸೆರೆ

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗದ ಶಿವಪೇಟೆ ಗ್ರಾಮದಲ್ಲಿ ಶ್ರೀ ಜಡಿ ಶಂಕರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವದ ವೇಳೆ ಬೆಂಕಿ ಆಕಸ್ಮಿಕ ನಡೆದಿದೆ. ಶಿವಪೇಟೆಯಲ್ಲಿ ಸುಪ್ರಸಿದ್ಧ ಜಡಿ ಶಂಕರಲಿಂಗ ದೇವರ ಜಾತ್ರೆಯರಥೋತ್ಸವ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ರಥಕ್ಕೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ಆಕಸ್ಮಿಕದಲ್ಲಿ ಹೆಚ್ಚಿನ ಅಪಾಯ ಸಂಭವಿಸಿಲ್ಲ.

ಮಹಾರಥೋತ್ಸವ ನಡೆಯುತ್ತಿದ್ದಾಗ ಪಟಾಕಿ ಸಿಡಿತದಿಂದ ರಥಕ್ಕೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಭಕ್ತರು ಬೆಂಕಿ ನಂದಿಸಿದ್ದಾರೆ.

0 / 5. 0

ಪ್ರಮುಖ ಸುದ್ದಿ :-   ಕೆಪಿಎಸ್‌ಸಿ ಹಗರಣ; ಐಎಎಸ್‌ ಅಧಿಕಾರಿ ಜ್ಞಾನೇಂದ್ರಕುಮಾರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಸರ್ಕಾರದ ಅನುಮತಿ

ನಿಮ್ಮ ಕಾಮೆಂಟ್ ಬರೆಯಿರಿ

advertisement