ಕೋವಿಡ್‌ ಲಸಿಕೆ ತೆಗೆದುಕೊಳ್ಳಲು ಹೆದರಿ ಮರವೇರಿ ಕುಳಿತ ವ್ಯಕ್ತಿ..! ವೀಕ್ಷಿಸಿ

ಕೊರೊನಾದಿಂದ ರಕ್ಷಣೆ ಪಡೆಯಲು ಸರ್ಕಾರವೂ ಪ್ರತಿಯೊಬ್ಬರೂ ಕೋವಿಡ್​ ವ್ಯಾಕ್ಸಿನ್​ ತೆಗೆದುಕೊಳ್ಳಬೇಕು ಎಂದು ಹೇಳುತ್ತಿದೆ. ಆದರೆ ಇನ್ನೂ ಅನೇಕ ಕಡೆ ಕೋವಿಡ್‌ ಲಸಿಕೆಗೆ ಹೆದರಿ​ ದೂರ ಓಡುವವರಿದ್ದಾರೆ. ಇಂಥದ್ದೇ ಒಂದು ಘಟನೆಯಲ್ಲಿ ವ್ಯಾಕ್ಸಿನ್​ಗೆ ಹೆದರಿ ವ್ಯಕ್ತಿ ಮರವೇರಿ ಕುಳಿತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಇದು ಪಾಂಡಿಚೇರಿಯ ವಿಲ್ಲನೂರ್​ ಎನ್ನುವ ಗ್ರಾಮದಲ್ಲಿ ಮನೆಯ ಬಾಗಿಲಿಗೆ ಆರೋಗ್ಯ ಕಾರ್ಯಕರ್ತೆಯರು ಬಂದ ವೇಳೆ ವ್ಯಕ್ತಿಯೊಬ್ಬ ಅದರಿಂದ ತಪ್ಪಿಸಿಕೊಳ್ಳಲು ಮನೆಯ ಎದುರಿನ ಮರವೇರಿ ಕುಳಿತಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.
ವಿಡಿಯೋದಲ್ಲಿ ಆರೋಗ್ಯ ಕಾರ್ಯಕರ್ತೆಯರು ಮನೆಯ ಬಳಿ ಲಸಿಕೆ​ ನೀಡಲು ಬಂದು ನಿಂತ ವೇಳೆ ಸುಮಾರು 40 ವರ್ಷದ ವ್ಯಕ್ತಿ ಮರವೇರಿ ಕುಳಿತಿರುವುದನ್ನು ಕಾಣಬಹುದು. ಅಲ್ಲೇ ಕುಳಿತುಕೊಂಡು ನನಗೆ ಲಸಿಕೆ ಬೇಡ ಎಂದು ಕೂಗಿ ಹೇಳಿದ್ದಾನೆ. ಆರೋಗ್ಯ ಕಾರ್ಯಕರ್ತೆಯರು ಮನವಿ ಮಾಡಿದರೂಕೆಳಗಿಳಿದು ಬರಲಿಲ್ಲ..

ಪಾಂಡೀಚೇರಿ ಸರ್ಕಾರ 100 ರಷ್ಟು ವ್ಯಾಕ್ಸಿನೇಷನ್​ ಡ್ರೈವ್​ ನಡೆಸಲು ನಿರ್ಧರಿಸಿದೆ. ಆದ್ದರಿಂದ ಮನೆ ಮನೆಗೆ ತೆರಳಿ ಆರೋಗ್ಯ ಕಾರ್ಯಕರ್ತೆಯರು ಮೊದಲ ಡೋಸ್​ ಮತ್ತು ಎರಡನೇ ಡೋಸ್​ ಸಹ ನೀಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement