ಆವರ್ತಕ ಕೆವೈಸಿ ಅಪ್‌ಡೇಟ್‌ನ ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದ ಆರ್‌ಬಿಐ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಂತ್ರಿತ ಘಟಕಗಳಿಂದ ಗ್ರಾಹಕರ ಕೆವೈಸಿ (KYC) ಕಡ್ಡಾಯ ಆವರ್ತಕ ನವೀಕರಣಕ್ಕಾಗಿ ಗಡುವನ್ನು ಮಾರ್ಚ್ 31, 2022ರ ವರೆಗೆ ವಿಸ್ತರಿಸಿದೆ.
ಕೊರೊನಾದ ಓಮಿಕ್ರಾನ್‌ ಪ್ರಭೇದವು ಭಾರತದಲ್ಲೂ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಗಡುವನ್ನು 2022ರ ಮಾರ್ಚ್‌ 31ರ ವರೆಗೆ ವಿಸ್ತರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ನೋಟಿಸ್‌ನಲ್ಲಿ ತಿಳಿಸಿದೆ.
ಮೇ 5, 2021 ರ ಸುತ್ತೋಲೆಯ ಪ್ರಕಾರ, ಸಾಂಕ್ರಾಮಿಕ ರೋಗದಿಂದಾಗಿ ಡಿಸೆಂಬರ್ 31ರ ವರೆಗೆ ನವೀಕರಿಸದ ಖಾತೆಗಳ ಕಾರ್ಯಾಚರಣೆಗಳ ಮೇಲೆ ನಿರ್ಬಂಧಗಳನ್ನು ವಿಧಿಸದಂತೆ ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಹಾಗೂ ಕಿರು ಹಣಕಾಸು ಸಂಸ್ಥೆಗಳಿಗೆ ಸೂಚಿಸಲಾಗಿತ್ತು. ಈಗ ಓಮಿಕ್ರಾನ್‌ ಹಿನ್ನೆಲೆಯಲ್ಲಿ ಈ ಸಡಿಲಿಕೆಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ.
ಕೋವಿಡ್‌-19 ನ ಹೊಸ ರೂಪಾಂತರದಿಂದಾಗಿ ಪ್ರಚಲಿತದಲ್ಲಿರುವ ಅನಿಶ್ಚಿತತೆಯ ದೃಷ್ಟಿಯಿಂದ, ಮೇಲೆ ತಿಳಿಸಲಾದ ಸುತ್ತೋಲೆಯಲ್ಲಿ ಒದಗಿಸಲಾದ ಸಡಿಲಿಕೆಯನ್ನು ಈ ಮೂಲಕ ಮಾರ್ಚ್ 31, 2022 ರವರೆಗೆ ವಿಸ್ತರಿಸಲಾಗಿದೆ” ಎಂದು ಆರ್‌ಬಿಐ ಗುರುವಾರ ತಿಳಿಸಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement