ಕರ್ನಾಟಕದಲ್ಲಿ ಕೊರೊನಾ ಸೋಂಕು ಮತ್ತೆ ಏರಿಕೆ: ಒಂದೇ ದಿನ 832 ಮಂದಿಗೆ ಹೊಸದಾಗಿ ಸೋಂಕು ದೃಢ

ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 832 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಎಂಟು ಮಂದಿ ಮೃತಪಟ್ಟಿದ್ದಾರೆ. ಇದೇ ವೇಳೆ 335 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಕೊವಿಡ್ ಪಾಸಿಟಿವಿಟಿ ಪ್ರಮಾಣ ಶೇ 0.70 ಹಾಗೂ ಸೋಂಕಿನಿಂದ ಸಾವಿನ ಸರಾಸರಿ ಶೇ 0.96 ಇದೆ. ರಾಜ್ಯದಲ್ಲಿ ಈವರೆಗೆ 30,07,337 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 29,60,261 ಮಂದಿ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳು 8712ಕ್ಕೆ ಏರಿಕೆಯಾಗಿದೆ. ಈವರೆಗೆ ಒಟ್ಟು 38,335 ಮಂದಿ ಕೊವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು 656 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಐವರು ಮೃತಪಟ್ಟಿದ್ದಾರೆ. 211 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಗರದಲ್ಲಿ ಈವರೆಗೆ ಒಟ್ಟು 12,63,618 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 12,39,931 ಜನರು ಚೇತರಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ7286 ಸಕ್ರಿಯ ಪ್ರಕರಣಗಳಿವೆ. ಈವರೆಗೆ 16,400 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲಾವಾರು ಸೋಂಕಿನ ಮಾಹಿತಿ..:
ಬೆಂಗಳೂರು ನಗರ- 656, ಬಳ್ಳಾರಿ- 6, ಬೆಳಗಾವಿ- 12, ಬೆಂಗಳೂರು ಗ್ರಾಮಾಂತರ- 5, ಚಾಮರಾನಗರ-1, ಚಿಕ್ಕಬಳ್ಳಾಪುರ-1, ರಾಮನಗರ-1, ಗದಗ-1, ಉತ್ತರ ಕನ್ನಡ-1, ವಿಜಯಪುರ -1, ಚಿಕ್ಕಮಗಳೂರು -3, ದಕ್ಷಿಣ ಕನ್ನಡ -30, ಧಾರವಾಡ-9, ಮೈಸೂರು- 9, ಹಾಸನ -11, ಕಲಬುರಗಿ-9, ಕೊಡಗು-21, ಕೋಲಾರ -8, ಮಂಡ್ಯ -7, ಶಿವಮೊಗ್ಗ -2, ತುಮಕೂರು -3, ಉಡುಪಿ -35.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ

ಎಲ್ಲಿ ಎಷ್ಟು ಮಂದಿ ಸಾವು?
ಬೆಂಗಳೂರು ನಗರ 5, ದಕ್ಷಿಣ ಕನ್ನಡ, ಮಂಡ್ಯ, ಉತ್ತರ ಕನ್ನಡ ತಲಾ 1

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement