ಬಿಹಾರದಲ್ಲಿ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ ಮಹಿಳೆ..!

ಪಾಟ್ನಾ: ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಗುರುವಾರ 4 ಕಾಲುಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ…!
ಬೈಕುಂತ್‌ಪುರ ಬ್ಲಾಕ್‌ನ ರೆವ್ತಿತ್ ಗ್ರಾಮದ ನಿವಾಸಿಯಾಗಿರುವ ಮಗುವಿನ ತಾಯಿ ರವಿನಾ ಖಾತೂನ್ ಅವರನ್ನು ಗುರುವಾರ ಬೆಳಗ್ಗೆ ಹೆರಿಗೆ ನೋವಿನ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ದಾಖಲಿಸಲಾಗಿತ್ತು. ಖಾತೂನ್ ನಾಲ್ಕು ಕಾಲುಗಳಿರುವ ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ನಾಲ್ಕು ಕಾಲುಗಳಿರುವುದನ್ನು ಕಂಡು ವೈದ್ಯರು ಬೆಚ್ಚಿಬಿದ್ದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರೇವ್ತಿತ್ ಗ್ರಾಮದಲ್ಲಿ ಸುದ್ದಿ ಹರಡಿದ ನಂತರ ಹೆಚ್ಚಿನ ಸಂಖ್ಯೆಯ ಗ್ರಾಮಸ್ಥರು ಮಗುವನ್ನು ನೋಡಲು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಮಾಯಿಸಿದರು. ಪಿಎಚ್‌ಸಿ ವೈದ್ಯರು ತಕ್ಷಣ ಶಿಶುವನ್ನು ಗೋಪಾಲಗಂಜ್‌ನ ಸದರ್ ಆಸ್ಪತ್ರೆಯ ಪಿಐಸಿಯು ವಾರ್ಡ್‌ಗೆ ಉತ್ತಮ ಆರೈಕೆಗಾಗಿ ಕಳುಹಿಸಿದ್ದಾರೆ.
ಸದರ್ ಆಸ್ಪತ್ರೆಯ ಹಿರಿಯ ವೈದ್ಯ ಡಾ.ಸೌರಭ್ ಅಗರವಾಲ್ ಮಾತನಾಡಿ, ಇಂತಹ ಪ್ರಕರಣಗಳು ಲಕ್ಷಕ್ಕೆ ಒಂದು ಅಪರೂಪ. 4 ಕಾಲುಗಳನ್ನು ಹೊರತುಪಡಿಸಿ ಮಗುವಿನ ಲಕ್ಷಣಗಳು ಸಾಮಾನ್ಯವಾಗಿದೆ. ಮೂರು ಕಾಲುಗಳು ಮುಂಭಾಗದಲ್ಲಿ ಮತ್ತು ಒಂದು ಹಿಂಭಾಗದಲ್ಲಿವೆ. ಇಂತಹ ಪ್ರಕರಣಗಳು ಬಹುಶಃ ಜನನಾಂಗದ ಅಸ್ವಸ್ಥತೆಯಿಂದ ಕಾಣಿಸಿಕೊಳ್ಳುತ್ತವೆ. ನಾವು ಶಿಶುವಿನ ವರದಿಯನ್ನು ಗೋಪಾಲ್ಗಂಜ್ಸಿವಿಲ್ ಸರ್ಜನ್ ಕಚೇರಿಗೆ ಕಳುಹಿಸಿದ್ದೇವೆ. ಎಂದು ಡಾ. ಅಗರವಾಲ್ ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement