ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸೋಂಕಿತ ರೋಗಿ ಹೃದಯಾಘಾತದಿಂದ ಸಾವು

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ರೂಪಾಂತರಿ ಓಮಿಕ್ರಾನ್ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಪುಣೆಯ ಪಿಂಪ್ರಿ-ಚಿಂಚವಾಡ್‌ನಲ್ಲಿ ನೆಲೆಸಿದ್ದ 52 ವರ್ಷದ ಓಮಿಕ್ರಾನ್ ಸೋಂಕಿತರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದು, ಈ ಸಾವನ್ನು ಓಮಿಕ್ರಾನ್ ಸೋಂಕಿನಿಂದ ಸಂಭವಿಸಿದ ಸಾವು ಎಂದು ಹೇಳಲು ವೈದ್ಯರು ನಿರಾಕರಿಸಿದ್ದಾರೆ. ಅವರ ಸಾವಿಗೆ ಇನ್ನಿತರ ಆರೋಗ್ಯ ಸಮಸ್ಯೆಗಳೇ ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಮೃತ ಮಹಾರಾಷ್ಟ್ರದ ಪಿಂಪ್ರಿ-ಚಿಂಚವಾಡ್‌ದ ನಿವಾಸಿ ಡಿಸೆಂಬರ್ 28ರಂದು ಯಶವಂತರಾವ್ ಚೌಹಾಣ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತರು ನೈಜೀರಿಯಾ ದೇಶಕ್ಕೆ ಹೋಗಿ ಬಂದ ಬಳಿಕ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಆದರೆ ಇವರ ಸಾವನ್ನು ಓಮಿಕ್ರಾನ್‌ನಿಂದ ಸಂಭವಿಸಿದ ಸಾವು ಎಂದು ಸೇರ್ಪಡೆಗೊಳಿಸಲು ಮಹಾರಾಷ್ಟ್ರ ಆರೋಗ್ಯ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.
ಏಕೆಂದರೆ ಮೃತ ವ್ಯಕ್ತಿ ಕಳೆದ 13 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದರು. ಹೀಗಾಗಿ, ಇವರ ಸಾವನ್ನು ಕೋವಿಡೇತರ ಕಾರಣಗಳಿಂದ ಸಂಭವಿಸಿದ ಸಾವು ಎಂದು ವರ್ಗೀಕರಣ ಮಾಡಲಾಗಿದೆ. ಈ ನಡುವೆ, ಮೃತರ ಸಾವಿನ ಬಳಿಕ ಅವರು ಓಮಿಕ್ರಾನ್‌ ಸೋಂಕಿತರಾಗಿದ್ದರು ಎಂದು ದೃಢಪಟ್ಟಿದೆ. ರಾಷ್ಟ್ರೀಯ ವೈರಾಣು ಸಂಸ್ಥೆ ಕೂಡಾ ಮೃತರಿಗೆ ಓಮಿಕ್ರಾನ ಸೋಂಕು ಇತ್ತು ಎಂದು ದೃಢಪಡಿಸಿದೆ.
ಮಹಾರಾಷ್ಟ್ರದ ಕೋವಿಡ್ ಡೆತ್ ಪ್ಯಾನಲ್‌ನ ಸದಸ್ಯರೊಬ್ಬರು, ಓಮಿಕ್ರಾನ್ ಸೋಂಕು ಮೃತರ ಸಾವಿಗೆ ಎಷ್ಟರ ಮಟ್ಟಿಗೆ ಕಾರಣ ಆಗಿರಬಹುದು ಎಂಬುದರ ಕುರಿತು ಇನ್ನಷ್ಟೇ ವಿವರ ಸಿಗಬೇಕಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದ ಸೋಂಕಿನ ಮಾದರಿಗಳ ಪೈಕಿ ಶೇ. 37%ರಷ್ಟು ಮಾದರಿಗಳು ಓಮಿಕ್ರಾನ್ ಸೋಂಕನ್ನು ಖಚಿತಪಡಿಸಿದ್ದು, ರಾಜ್ಯದಲ್ಲಿ ಸಮದಾಯದೊಳಗೆ ಓಮಿಕ್ರಾನ ಹರಡುತ್ತಿರುವುದನ್ನು ಇದು ಖಚಿತಪಡಿಸಿದೆ. ಸದ್ಯ ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 198 ಓಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಈವರೆಗೂ 450 ಮಂದಿಗೆ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.

ಪ್ರಮುಖ ಸುದ್ದಿ :-   ವೀಡಿಯೊ | ಜನವರಿಯಲ್ಲಿ ಉದ್ಘಾಟನೆಯಾದ ನಂತರ ಅಯೋಧ್ಯೆ ರಾಮಮಂದಿರದಲ್ಲಿ ಇದೇ ಮೊದಲ ಬಾರಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ

 

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement