ಮಾಶಾಳದಲ್ಲಿ ಹಿರೇಮಠದ ಮೇಲೆ ಕಲ್ಲು ತೂರಾಟ: ಗಾಜುಗಳು ಪುಡಿ

ಕಲಬುರ್ಗಿ: ಅಫಜಲಪುರ ತಾಲೂಕಿನ ಮಾಶಾಳ ಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದೆ.
ಗುರುವಾರ ರಾತ್ರಿ ವೇಳೆ ಮಠದಲ್ಲಿ ಶ್ರೀಗಳು ಇದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಕೇದಾರ ಶ್ರೀಗಳ ಮೇಲೆ ಹಲ್ಲೆಗೂ ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ಕಿಡಿಗೇಡಿಗಳು ಮಠದ ಕಿಟಕಿಗಳಿಗೆ ಕಲ್ಲು ತೂರಿ ಗ್ಲಾಜನ್ನು ಪುಡಿ ಪುಡಿ ಮಾಡಿದ್ದಾರೆ‌. ಮಠದ ಭಕ್ತರು ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌‌ ನಡೆಸಿದ್ದಾರೆ.
ಇದೇ 28 ರಂದು ಕಲಬುರ್ಗಿಯಲ್ಲಿ ಹಿಂದು ಜಾಗೃತಿ ಸೇನೆ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇದಾರ ಶ್ರೀಗಳು ಲವ್​ ಜಿಹಾದ್​
ಶ್ರೀಗಳು ಲವ್ ಜಿಹಾದ್, ಗೋ ಹತ್ಯೆ ನಿಷೇಧದ ಕುರಿತು ಮಾತನಾಡಿದ್ದರು. ಇದಕ್ಕಾಗಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement