
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಇಂದು (ಜನವರಿ 01) ಹೊಸದಾಗಿ 1033 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಬೆಂಗಳೂರಿನಲ್ಲಿಯೇ ಹೊಸದಾಗಿ 810 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 30,08,370 ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 29,60,615 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 38,340 ಜನ ಮೃತಪಟ್ಟಿದ್ದಾರೆ ಹಾಗೂ 9,386 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿದೆ.
ಬೆಂಗಳೂರಿನಲ್ಲಿ ಇಂದು ಒಂದೇ ದಿನ 810 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಮೂಲಕ, ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,64,428 ಕ್ಕೆ ಏರಿಕೆಯಾಗಿದೆ. ಈ ಪೈಕಿ 12,40,149 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ 16,402 ಜನರ ಸಾವು ಸಂಭವಿಸಿದೆ. ಸದ್ಯ 7,876 ಸಕ್ರಿಯ ಪ್ರಕರಣಗಳಿವೆ.

ಜಿಲ್ಲಾವಾರು ಸೋಂಕಿನ ವಿವರ
ಬಾಗಲಕೋಟೆ -0, ಬಳ್ಳಾರಿ -3, ಬೆಳಗಾವಿ -10, ಬೆಂಗಳೂರು ಗ್ರಾಮಾಂತರ -6, ಬೆಂಗಳೂರು ನಗರ -810, ಬೀದರ್ -2, ಚಾಮರಾಜನಗರ -2, ಚಿಕ್ಕಬಳ್ಳಾಪುರ -0, ಚಿಕ್ಕಮಗಳೂರು -10, ಚಿತ್ರದುರ್ಗ -4, ದಕ್ಷಿಣ ಕನ್ನಡ -48, ದಾವಣಗೆರೆ -0, ಧಾರವಾಡ -9, ಗದಗ -0, ಹಾಸನ -5, ಹಾವೇರಿ -0, ಕಲಬುರಗಿ -8, ಕೊಡಗು -13, ಕೋಲಾರ -6, ಕೊಪ್ಪಳ -0, ಮಂಡ್ಯ -23, ಮೈಸೂರು -29, ರಾಯಚೂರು -0, ರಾಮನಗರ -0, ಶಿವಮೊಗ್ಗ -3, ತುಮಕೂರು -8, ಉಡುಪಿ -28, ಉತ್ತರ ಕನ್ನಡ -5, ವಿಜಯಪುರ -1, ಯಾದಗಿರಿ-0 ಕೊವಿಡ್ 19 ಪ್ರಕರಣಗಳು ದಾಖಲಾಗಿವೆ.
ಮೃತಪಟ್ಟವರ ವಿವರ
ಬೆಂಗಳೂರು ನಗರ-2, ಮಂಡ್ಯ-1, ತುಮಕೂರು-1 ಹಾಗೂ ಉತ್ತರ ಕನ್ನಡ-1 ಒಬ್ಬರು ಮೃತಪಟ್ಟಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ