ನಿವೇಶನ, ಮನೆ ಖರೀದಿದಾರರಿಗೆ ಹೊಸ ವರ್ಷದ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು: ರಾಜ್ಯ ಸರ್ಕಾರವು ನಿವೇಶನ, ಮನೆ ಖರೀದಿದಾರರಿಗೆ ಶುಭ ಸುದ್ದಿ ನೀಡಿದೆ. ಕಂದಾಯ ನಿವೇಶನ, ವಸತಿಗೃಹಗಳ ಮೇಲಿನ ಗೈಡೆನ್ಸ್ ಮೌಲ್ಯದಲ್ಲಿ ಶೇ.10ರಷ್ಟು ಕಡಿತ ಮಾಡಿದೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಸಚಿವ ಆರ್. ಅಶೋಕ ಮಾಹಿತಿ ನೀಡಿದ್ದು, ಕಳೆದ ಎರಡು ವರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಕಂದಾಯ ಇಲಾಖೆಯಿಂದ ಗಿಫ್ಟ್ ನೀಡಲು ನಿರ್ಧಾರಿಸಲಾಗಿದೆ.
ಆಸ್ತಿ ವಹಿವಾಟು ಸಂಬಂಧಿಸಿದಂತೆ, ಯಾರು ಖರೀದಿ ಮಾಡುತ್ತಾರೆ ಅವರಿಗೆ ಗೈಡೆನ್ಸ್ ಮೌಲ್ಯದಲ್ಲಿ 10% ಕಡಿಮೆ ಮಾಡಲಾಗಿದೆ. ಇದು ಮೂರು ತಿಂಗಳ ವರೆಗೆ ಅನ್ವಯವಾಗುತ್ತದೆ, 1-1-2022 ರಿಂದ 31-3-2022ರ ವರೆಗೂ ರಿಯಾಯಿತಿ ಇರಲಿದೆ ಎಂದು ಮಾಹಿತಿ ನೀಡಿದರು.
ಗಿಮಿಕ್ ಪಾದಯಾತ್ರೆ…
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪ ವಿಚಾರಕ್ಕೆ ಉತ್ತರಿಸಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರು ವರ್ಷ ಅಧಿಕಾರದಲ್ಲಿತ್ತು. ಐದು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಅದರ ಬಗ್ಗೆ ಯೋಚನೆ ಕೂಡ ಮಾಡಲಿಲ್ಲ. ಈಗ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಇದು ಗಿಮಿಕ್ ಪಾದಯಾತ್ರೆ. ಜನರ ಬಗ್ಗೆ ಅವರಿಗೆ ಕಿಂಚಿತ್ ಕಾಳಜಿ ಇಲ್ಲ. ಅವರಿಗೆ ನಿಜವಾಗಿ ಕಾಳಜಿ ಇದ್ದರೆ ಅಧಿಕಾರದಲ್ಲಿ ಇದ್ದಾಗಲೇ ಯೋಜನೆ ಮಾಡುತ್ತಿದ್ದರು ಎಂದರು.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement