ಬೆಳಗಾವಿ ಗಲಾಟೆ ವೈಫಲ್ಯ: ಬೆಳಗಾವಿ ಪೊಲೀಸ್ ಆಯುಕ್ತ ತ್ಯಾಗರಾಜನ್ ಎತ್ತಂಗಡಿ

ಡಾ. ಬೋರಲಿಂಗಯ್ಯ

ಬೆಳಗಾವಿ: ಬೆಳಗಾವಿ ಅಧಿವೇಶನದ ವೇಳೆ ಕಲ್ಲು ತೂರಾಟ, ರಾಯಣ್ಣ ಮೂರ್ತಿಗೆ ಹಾನಿ ಪ್ರಕರಣ ಸೇರಿದಂತೆ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲರಾದ ಕಾರಣದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.
ಬೆಳಗಾವಿಗೆ ನೂತನ ಪೊಲೀಸ್ ಆಯುಕ್ತರನ್ನಾಗಿ ಡಾ.ಬೋರಲಿಂಗಯ್ಯ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಕೆ. ತ್ಯಾಗರಾಜ ಅವರನ್ನು ಬೆಂಗಳೂರು ಪೊಲೀಸ್ ನೇಮಕಾತಿ ವಿಭಾಗಕ್ಕೆ ವರ್ಗ ಮಾಡಲಾಗಿದೆ.
ಬೆಳಗಾವಿಯ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಹಾಮೇಳ ಹೆಸರಿನಲ್ಲಿ ಎಂಇಎಸ್ ಭಾಷಾ ಕಿಚ್ಚು ಹೊತ್ತಿಸಲು ಯತ್ನಿಸಿತ್ತು. ಅಲ್ಲದೇ ಕಲ್ಲು ತೂರಾಟ ನಡೆಸಿ ಸರ್ಕಾರಿ ವಾಹನ ಜಖಂಗೊಳಿಸಲಾಗಿತ್ತು. ರಾಯಣ್ಣ ಮೂರ್ತಿಗೆ ಹಾನಿ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 38 ಜನರನ್ನು ಪೊಲೀಸರು ಬಂಧಿಸಿದ್ದರು.ಈ ಎಲ್ಲ ಗಲಾಟೆಗಳಿಗೆ ಪೊಲೀಸ್ ವೈಫಲ್ಯದ ಆರೋಪವೂ ಕೇಳಿ ಬಂದಿತ್ತು. ಈಗ ಸರ್ಕಾರ ನಗರ ಪೊಲೀಸ್ ‌ಆಯುಕ್ತರನ್ನೇ ಬದಲಾಯಿಸಿದೆ. ಡಾ.ಬೋರಲಿಂಗಯ್ಯ ಅವರನ್ನು ಬೆಳಗಾವಿ ನಗರದ ಪೊಲೀಸ್‌ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement