ಹೊಸ ವರ್ಷಾಚರಣೆಗೆ ಮೇಕೆ ಕದ್ದುತಂದು ಬಾಡೂಟ ಮಾಡಿದ ಎಎಸ್‌ಐ ಸಸ್ಪೆಂಡ್‌..!

ಬಲಂಗೀರ್: ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದ ಮುನ್ನಾದಿನದ ಹಬ್ಬದಂದು ಗ್ರಾಮಸ್ಥರ ಮೇಕೆ ಕದ್ದುತಂದು ಮಟನ್‌ ಪಾರ್ಟಿ ಮಾಡಿ ತಿಂದ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಶುಕ್ರವಾರ ಸಂಜೆ ಬಲಂಗೀರ್ ಜಿಲ್ಲೆಯ ಸಿಂಧೆಕೆಲಾ ಪೊಲೀಸ್ ಠಾಣೆಯ ಸಿಬ್ಬಂದಿ ಹೊಸ ವರ್ಷದ ಸಂಭ್ರಮಾಚರಣೆಗೆ ಔತಣಕೂಟವನ್ನು ಯೋಜಿಸುತ್ತಿದ್ದಾಗ, ಕಾಂಪೌಂಡ್‌ ಬಳಿ ದಾರಿ ತಪ್ಪಿ ಬಂದ ಮೇಕೆ ಸುಲಭವಾಗಿ ಇವರ ಬಲೆಗೆ ಬಿತ್ತು. ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ (ಎಎಸ್‌ಐ) ಸುಮನ್ ಮಲ್ಲಿಕ್ ಅವರ ಸೂಚನೆ ಮೇರೆಗೆ ಸಮೀಪದಲ್ಲೇ ವಾಸಿಸುತ್ತಿದ್ದ ಬಡ ಹಳ್ಳಿಯವನೊಬ್ಬನ ಮೇಕೆಯನ್ನು ಹಿಡಿದು ತಂದು ಕೊಂದು ಬೇಯಿಸಲಾಯಿತು.
ಅದಕ್ಕಿಂತ ಹೆಚ್ಚಾಗಿ ಮೇಕೆಯ ಮಾಲೀಕ ಸಂಕೀರ್ತನ್ ಗುರು ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಆತನನ್ನು ಪೊಲೀಸ್ ಠಾಣೆಯಲ್ಲಿ ಲಾಕ್‌ಅಪ್‌ನಲ್ಲಿ ಹಾಕಿ ಕೂಡ್ರಿಸಲಾಯಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಠಾಣೆ ಎದುರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರನ್ನು ಸಮಾಧಾನಪಡಿಸಲು ಸುಮನ್ ಮಲ್ಲಿಕ್ ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾದ ಕಾರಣ, ವಿಷಯವು ಬಲಂಗೀರ್ ಎಸ್ಪಿ ನಿತಿನ್ ಕುಸಲ್ಕರ್ ಅವರ ಗಮನಕ್ಕೆ ಬಂದಿತು. ಕುಸಲ್ಕರ್ ಅವರು ಈ ಬಗ್ಗೆ ತನಿಖೆಗೆ ಆದೇಶಿಸಿದರು. ತನಿಖೆಯು ಸಿಂಧಿಕೆಲಾದಲ್ಲಿನ ಪೊಲೀಸ್ ಸಿಬ್ಬಂದಿ ಮೇಕೆ ಕದ್ದು ತಂದು ಅದನ್ನು ಕೊಂದು ಮಾಂಸದೂಟ ಸವಿದಿದ್ದು ಗೊತ್ತಾಯಿತು.
ಅದಕ್ಕಿಂತ ಹೆಚ್ಚಾಗಿ ಮೇಕೆಯ ಮಾಲೀಕ ಸಂಕೀರ್ತನ್ ಗುರು ಈ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ಆತನನ್ನು ಪೊಲೀಸ್ ಠಾಣೆ ಕೊಠಡಿಯಲ್ಲಿ ಲಾಕ್‌ಅಪ್‌ನಲ್ಲಿ ಇರಿಸಿರುವುದು ಬಯಲಿಗೆ ಬಂತು.
ಪೊಲೀಸರು ನನ್ನ ಮೇಕೆಯನ್ನು ಕೊಂದು ಬೇಯಿಸಿದರು. ಅವರು ನನ್ನ ಮೇಕೆಯನ್ನು ಕೊಲ್ಲುವುದನ್ನು ನನ್ನ ಹೆಣ್ಣುಮಕ್ಕಳು ನೋಡಿದ್ದರು. ದೂರದಿಂದಲೇ ನೋಡಿ ಅಳತೊಡಗಿದರು. ನಾನು ದೂರು ನೀಡಲು ಬಂದಾಗ, ಅಧಿಕಾರಿ ನನಗೆ ಬೆದರಿಕೆ ಹಾಕಿದರು ಮತ್ತು ನಾನು ಅಪರಾಧ ಮಾಡಿದ್ದೇನೆ ಎಂದು ನನ್ನನ್ನು ಲಾಕ್‌ಅಪ್‌ನಲ್ಲಿ ಇರಿಸಿದರು, ಹಾಗೂ ಹಣಕ್ಕಾಗಿ ಬೇಡಿಕೆ ಇಟ್ಟರು ಎಂದು ರೈತ ಸಂಕೀರ್ತನ್ ಗುರು ಹೇಳಿದ್ದಾರೆ.
ಎಎಸ್‌ಐ ಸುಮನ್ ಮಲ್ಲಿಕ್ ಅವರು ಮೇಕೆ ಮಾಲೀಕರ ಅನುಮತಿಯಿಲ್ಲದೆ ಮೇಕೆಯನ್ನು ಸೆರೆಹಿಡಿದು ಕೊಲ್ಲುವ ಮೂಲಕ ದೊಡ್ಡ ತಪ್ಪನ್ನು ಮಾಡಿದ್ದು, ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಗ್ರಾಮಸ್ಥರಿಗೆ ಬೆದರಿಕೆ ಹಾಕಿ ಲಾಕ್ಅಪ್‌ ನಲ್ಲಿ ಇಟ್ಟಿದ್ದಾರೆ. ಘಟನೆಯ ಕುರಿತು ತನಿಖಾ ವರದಿಯ ನಂತರ ಎಎಸ್‌ಐ ಅನ್ನು ಅಮಾನತುಗೊಳಿಸಲಾಗಿದೆ ಎಂದು ಎಸ್‌ಪಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ವಿರುದ್ಧ ದೂರು ಬಂದ ಕೆಲವೇ ಗಂಟೆಗಳಲ್ಲಿ ಎಎಸ್‌ಐ ಅಮಾನತುಗೊಂಡ ಸುದ್ದಿ ಒಡಿಶಾದಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement